ADVERTISEMENT

ದನಿ ಕೇಳದವರ ಬಾಳಿಗಿಂದು ಗಟ್ಟಿಮೇಳ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 20:54 IST
Last Updated 20 ಡಿಸೆಂಬರ್ 2018, 20:54 IST
ಸ್ವಯಂವರ ಟ್ರಸ್ಟ್‌ ಗುರುವಾರ ಆಯೋಜಿಸಿದ್ದ 18ನೇ ವಾರ್ಷಿಕ ಸ್ವಯಂವರ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಸಿ.ಎನ್‌.ವಿಜಯರಾಜ್‌, ಮದುವೆಗೆ ಆಯ್ಕೆಯಾದ ಶ್ರವಣ ದೋಷವುಳ್ಳ ಜೋಡಿಗಳ ಕೈಗಳನ್ನು ಎತ್ತಿಹಿಡಿದರು – ಪ್ರಜಾವಾಣಿ ಚಿತ್ರ
ಸ್ವಯಂವರ ಟ್ರಸ್ಟ್‌ ಗುರುವಾರ ಆಯೋಜಿಸಿದ್ದ 18ನೇ ವಾರ್ಷಿಕ ಸ್ವಯಂವರ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಸಿ.ಎನ್‌.ವಿಜಯರಾಜ್‌, ಮದುವೆಗೆ ಆಯ್ಕೆಯಾದ ಶ್ರವಣ ದೋಷವುಳ್ಳ ಜೋಡಿಗಳ ಕೈಗಳನ್ನು ಎತ್ತಿಹಿಡಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಿವಿ ಕೇಳದ ಜೀವಗಳಿಂದು ಹಸೆಮಣೆ ಏರುತ್ತಿವೆ. ಮೌನದ ನಡುವೆ ಅವರ ಬದುಕಿನಲ್ಲಿ ಗಟ್ಟಿಮೇಳ ಮೊಳಗುತ್ತಿದೆ.

ಇಂಥ ಜೀವಗಳ ಭಾವಗಳಿಗೆ ಸ್ವಯಂವರ ಟ್ರಸ್ಟ್‌ ಕಿವಿ, ಬಾಯಿಯಾಗಿ ಸ್ಪಂದಿಸಿದೆ. ಟ್ರಸ್ಟ್ ‘ಪೌರೋಹಿತ್ಯದಲ್ಲಿ’ ಗುರುವಾರ ಸ್ವಯಂವರ ನಡೆದಿದೆ. ಮೌನದ ಮನಗಳಿಗೆ ಜಾತಿ ಮತದ ಹಂಗು ಇಲ್ಲ. ಅವರವರ ಭಾವ ಅರ್ಥ ಮಾಡಿಕೊಳ್ಳುವ ಮನಸ್ಸುಗಳಿಗೇ ಇಲ್ಲಿ ಮಣೆ.

ಶ್ರವಣದೋಷವುಳ್ಳವರಿಗಾಗಿಯೇ ಏರ್ಪಡಿಸಿರುವ ಸ್ವಯಂವರದಲ್ಲಿವಿವಿಧ ರಾಜ್ಯಗಳಿಂದ ವಿವಿಧ ಧರ್ಮದ 30 ಯುವತಿಯರು, 40 ಯುವಕರು ಭಾಗವಹಿಸಿದ್ದರು. ಇಂಥವರ ಸಂಕೇತ ಭಾಷೆಯನ್ನೇ ಅರ್ಥ ಮಾಡಿಕೊಂಡು ಇನ್ನೊಬ್ಬರೊಂದಿಗೆ ವಿನಿಮಯ ಮಾಡಲು ಸಂಜ್ಞೆ ಭಾಷಾ ಪರಿಣತರಿದ್ದರು.

ADVERTISEMENT

ಆಂಧ್ರಪ್ರದೇಶದ ಅನಂತಪುರಜಿಲ್ಲೆಯಿಂದ ಬಂದ ಹರಿಪ್ರಿಯಾ ಎಂಬ 20 ವರ್ಷದ ಮೂಕ ಯುವತಿ, ‘ಸುಶಿಕ್ಷಿತ, ಉದ್ಯೋಗಸ್ಥ ಉತ್ತಮ ವ್ಯಕ್ತಿಯನ್ನೇನಾನು ಅರಸುತ್ತಿದ್ದೇನೆ’ ಎಂದು ಸಂಜ್ಞೆ ಮೂಲಕ ಧೈರ್ಯದಿಂದಲೇ ಹೇಳಿದರು.

‘ನಿಮ್ಮ ಜೋಡಿಯನ್ನು ಇಂದೇ ಆಯ್ಕೆ ಮಾಡಿಕೊಂಡು ಮರುದಿನವೇ ದಾಂಪತ್ಯಕ್ಕೆ ಕಾಲಿಡಬೇಕೆನ್ನುವ ತತ್ವವನ್ನು ಇಲ್ಲಿನ ಸದಸ್ಯರು ಬಲವಾಗಿ ನಂಬಿದ್ದಾರೆ.ಹೊಂದಾಣಿಕೆ ಆಗುವಂಥವರನ್ನು ಹುಡುಕುವುದು ನಿಜಕ್ಕೂ ಕಷ್ಟದ ಕೆಲಸ’ ಎಂದು ಟ್ರಸ್ಟ್‌ನ ಸಂಸ್ಥಾಪಕ ಸಿ.ಎನ್‌.ವಿಜಯರಾಜ್‌ ಅಭಿಪ್ರಾಯಪಟ್ಟರು.

2001ರಿಂದ ಸುಮಾರು 5,000ಕ್ಕೂ ಅಧಿಕ ಜೋಡಿಗಳನ್ನು ಜತೆಯಾಗಿಸುವಲ್ಲಿ ವಿಜಯರಾಜ್ ಪ್ರಮುಖ ಪಾತ್ರವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.