ಬೆಂಗಳೂರು: ರಕ್ಷಣಾ ಸಂಸ್ಥೆಗಳು ಮತ್ತು ರಕ್ಷಣಾ ಉದ್ಯಮ ಪ್ರತಿನಿಧಿಗಳ ವಿಚಾರ ವಿನಿಮಯಕ್ಕಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ‘ಲಕ್ಷ್ಯ 2ಕೆ24’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವ್ಯಾಪಾರ, ನಾವೀನ್ಯತೆ ಮತ್ತು ಭವಿಷ್ಯದ ಬಗ್ಗೆ ಚರ್ಚೆಗಳು ನಡೆದವು.
ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ವಿವಿಧ ನಾಯಕರು ಭಾಗವಹಿಸಿದ್ದರು. ರಕ್ಷಣಾ ವಲಯ ಮತ್ತು ಕಾರ್ಪೊರೇಟ್ ವಲಯ ಕೈಜೋಡಿಸಬೇಕಾದ ಅಗತ್ಯದ ಬಗ್ಗೆಯೂ ಚರ್ಚೆಗಳಾದವು.
ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಇತ್ತೀಚಿನ ಕಾರ್ಯಚಟುವಟಿಕೆ, ಹೊಸ ಅನ್ವೇಷಣೆಯ ಅಗತ್ಯ, ಅನುಭವಿಗಳ ಪಾತ್ರದ ಬಗ್ಗೆ ವಿಚಾರ ಮಂಡನೆ ಮಾಡಲಾಯಿತು.
ವೈವಿಧ್ಯವನ್ನು ಕಾಪಾಡಿಕೊಳ್ಳುವುದು, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು, ಕಲಿಕೆ ಮತ್ತು ಅಭಿವೃದ್ಧಿ ಒಟ್ಟೊಟ್ಟಿಗೆ ಸಾಗುವುದು, ಸ್ಮಾರ್ಟ್‌ಅಪ್‌ಗೆ ಕೊಡುಗೆಗಳನ್ನು ನೀಡುವುದು ಪರಿವರ್ತಕ ತಂತ್ರಜ್ಞಾನ, ವಿನ್ಯಾಸದ ಚಿಂತನೆ, ಡೆಟಾ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆಗಳನ್ನು ರಕ್ಷಣಾ ವಲಯದಲ್ಲಿ ಬಳಸಿಕೊಳ್ಳುವುದರ ಬಗ್ಗೆ ವಿಚಾರ ವಿನಿಮಯಗಳಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.