ADVERTISEMENT

ಬೆಂಗಳೂರಿನ ಪ್ರೌಢಶಾಲಾ ಶಿಕ್ಷಕರಿಗೆ ಇಂದು ಮರು ಕೌನ್ಸೆಲಿಂಗ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:46 IST
Last Updated 18 ಅಕ್ಟೋಬರ್ 2019, 19:46 IST

ಬೆಂಗಳೂರು: 2018-19ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಲ್ಲಿ ‘ಎ’ ಪಟ್ಟಿಯಲ್ಲಿದ್ದು, ‘ಬಿ ಮತ್ತು ‘ಸಿ’ ವಲಯದಲ್ಲಿ ಹುದ್ದೆ ದೊರೆಯದ ಬೆಂಗಳೂರು ವಿಭಾಗದ 40 ಮಂದಿ ಪ್ರೌಢಶಾಲಾ ಶಿಕ್ಷಕರಿಗೆ ಶನಿವಾರ ಸಂಜೆ 4 ಗಂಟೆಗೆಕೆ. ಜಿ. ರಸ್ತೆಯ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಮರು ಕೌನ್ಸೆಲಿಂಗ್‌ ನಡೆಯಲಿದೆ.

ಶಿಕ್ಷಕರ ಪಟ್ಟಿಯನ್ನು ಇಲಾಖೆಯವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿರುವವರು ಕಡ್ಡಾಯವಾಗಿ ಹಾಜರಾಗಬೇಕು. ಉಪನಿರ್ದೇಶಕರ ಕಚೇರಿಯ ಒಬ್ಬ ಕಾರ್ಯ ನಿರ್ವಾಹಕರೂ ಕಡ್ಡಾಯವಾಗಿ ಹಾಜರಿರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT