ADVERTISEMENT

ಹೃದಯ ಸಂಬಂಧಿ ಕಾಯಿಲೆ: ಕಾರಿನಲ್ಲಿ ಟೆಕಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2022, 20:45 IST
Last Updated 21 ಡಿಸೆಂಬರ್ 2022, 20:45 IST
ವಿಜಯ್‌ ಕುಮಾರ್‌
ವಿಜಯ್‌ ಕುಮಾರ್‌   

ಬೆಂಗಳೂರು: ಮಹಾಲಕ್ಷ್ಮಿಲೇಔಟ್‌ ಪೊಲೀಸ್ ಠಾಣಾ ವ್ಯಾಪ್ತಿಯ ಕುರುಬರಹಳ್ಳಿ ಜಂಕ್ಷನ್ ಬಳಿ ಸಾಫ್ಟ್‌ವೇರ್ ಎಂಜಿನಿಯರ್‌ ವಿಜಯ್‌ ಕುಮಾರ್‌ (51) ಎಂಬು ವವರು ತಮ್ಮ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅವರು ನೆಲೆಸಿದ್ದರು.

‘ಹೃದಯ ಸಂಬಂಧಿ ಕಾಯಿಲೆ ಯಿಂದ ಬಳಲುತ್ತಿದ್ದ ಅವರು, ಇತ್ತೀಚಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತಮಗಿದ್ದ ಕಾಯಿಲೆ ಹಾಗೂ ಅದರ ಪರಿಣಾಮದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತಿದ್ದರೆಂದು ಕುಟುಂಬಸ್ಥರು ಹೇಳಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾರನ್ನು ಸರ್ವಿಸ್‌ಗೆ ಕೊಡುವು ದಾಗಿ ಮನೆಯಲ್ಲಿ ಹೇಳಿ ಕುರುಬರಹಳ್ಳಿ ಜಂಕ್ಷನ್‌ಗೆ ಬಂದಿದ್ದ ವಿಜಯಕುಮಾರ್‌ ಪಾದಚಾರಿ ಒಬ್ಬರನ್ನು ಕರೆದು, ‘ನನಗೆ ತುಂಬಾ ಸುಸ್ತಾಗುತ್ತಿದೆ. ಕಾರಿನಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾನು ಕಾರಿನ ಒಳಗೆ ಕುಳಿತ ಮೇಲೆ ಕವರ್‌ ಮುಚ್ಚಿ’ ಎಂದು ವಿನಂತಿಸಿದ್ದರು. ಅದರಂತೆ ಅವರು ಕವರ್‌ ಮುಚ್ಚಿ ತೆರಳಿದ್ದರು. ಇದನ್ನು ಪಕ್ಕದಲ್ಲಿ ಪಾನೀಪೂರಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಗಮನಿಸಿದ್ದರು. ಅದೇ ಸ್ಥಳದಲ್ಲಿ ನಿತ್ಯ ಕಾರು ನಿಲು ಗಡೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬಂದು ಕಾರು ಯಾರದ್ದು ಎಂದು ಪಾನೀಪೂರಿ ಮಾರಾಟಗಾರರನ್ನು ಪ್ರಶ್ನಿಸಿದ್ದರು. ಕಾರಿನ ಮಾಲೀಕರು ಕಾರಿನಲ್ಲಿ ಇದ್ದಾರೆ ಎಂದು ತಿಳಿದಾಗ ಬಾಗಿಲು ತೆರೆದು ಪರಿಶೀಲನೆ ನಡೆಸಿದರು. ಒದ್ದಾಟ ನಡೆಸುತ್ತಿರುವುದು ಕಂಡುಬಂದಿತ್ತು. ಪೊಲೀಸರ ನೆರವಿನಿಂದ ಆಸ್ಪತ್ರೆಗೆ ಕೊರೆದೊಯ್ಯುವ ಮಾರ್ಗ ಮಧ್ಯದಲ್ಲಿ ಟೆಕಿ ಮೃತಪಟ್ಟರು’ ಎಂದು ಹೇಳಿವೆ.

ADVERTISEMENT

‘ಕಾರಿನಲ್ಲಿದ್ದ ನೈಟ್ರೋಜನ್‌ ಸಿಲಿಂಡರ್ ಆನ್‌ ಮಾಡಲಾಗಿತ್ತು. ಮುಖಕ್ಕೆ ಪ್ಲಾಸ್ಟಿಕ್‌ ಕವರ್‌ ಕಟ್ಟಿಕೊಂಡು ಪೈಪ್‌ವೊಂದರ ಸಹಾಯದಿಂದ ಗಾಳಿ ಸೇವಿಸುತ್ತಿದ್ದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು. ಈ ಗಾಳಿ ಸೇವಿಸಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.