ADVERTISEMENT

ಬೆಂಗಳೂರು ದಕ್ಷಿಣ: ಅಚ್ಚರಿ ಆಯ್ಕೆ ಹಿಂದಿನ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 13:32 IST
Last Updated 30 ಏಪ್ರಿಲ್ 2019, 13:32 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಹೆಸರು: ತೇಜಸ್ವಿ ಸೂರ್ಯ

ವಯಸ್ಸು: 28

ತಂದೆ: ಎಲ್‌.ಎ.ಸೂರ್ಯನಾರಾಯಣ, ಅಬಕಾರಿ ಇಲಾಖೆಯ ನಿವೃತ್ತ ಜಂಟಿ ಆಯುಕ್ತ

ADVERTISEMENT

ಚಿಕ್ಕಪ್ಪ: ಎಲ್‌.ಎ.ರವಿಸುಬ್ರಹ್ಮಣ್ಯ, ಬಸವನಗುಡಿಯ ಬಿಜೆಪಿ ಶಾಸಕ

ಪ್ರೌಢಶಾಲೆ ವ್ಯಾಸಂಗ: ಕುಮಾರನ್ಸ್‌ ಸ್ಕೂಲ್‌

ಪದವಿ ಅಧ್ಯಯನ: ಜಯನಗರ ನ್ಯಾಷನಲ್‌ ಕಾಲೇಜು, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಾನೂನು ಪದವಿ

ವೃತ್ತಿ: ಹೈಕೋರ್ಟ್‌ ವಕೀಲ. ಹೈಕೋರ್ಟ್‌ನಲ್ಲಿ ಬಿಜೆಪಿ ಪರ ಹಲವು ಪ್ರಕರಣಗಳಲ್ಲಿ ವಾದಿಸಿದ್ದಾರೆ. ಸ್ವರಾಜ್ಯ, ‘ಒಪಿಂಡಿಯಾ’ ಹಾಗೂ ‘ಇಂಡಿಯಾ ಫ್ಯಾಕ್ಟ್ಸ್‌’ ಅಂಕಣಕಾರ. 370ನೇ ವಿಧಿ, ರಾಷ್ಟ್ರೀಯ ಭದ್ರತೆ ಹಾಗೂ ತ್ರಿವಳಿ ತಲಾಖ್‌ನಂತಹ ವಿಷಯಗಳ ಬಗ್ಗೆ ಆಳ ಅರಿವು

ಹಿನ್ನೆಲೆ: 2001ರಲ್ಲಿ ರಾಷ್ಟ್ರೀಯ ಬಾಲಶ್ರೀ ಪ್ರಶಸ್ತಿ ಪುರಸ್ಕೃತ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಷಾ ನಾರಾಯಣನ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು

*ಬಾಲ್ಯದಿಂದಲೂ ಆರ್‌ಎಸ್‌ಎಸ್‌ ಸ್ವಯಂಸೇವಕ. ಎಬಿವಿಪಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ. ಪ್ರಸ್ತುತ ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ

*ಸೆಂಟರ್‌ ಫಾರ್‌ ಎಂಟರ್‌ಪ್ರಿನ್ಯೂರಿಯಲ್‌ ಎಕ್ಸಲೆನ್ಸ್‌ ಹಾಗೂ ಅರೈಸ್‌ ಇಂಡಿಯಾ ಸಂಸ್ಥೆಯ ಸಹ ಸಂಸ್ಥಾಪಕ

*2018ರ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿಯ ಡಿಜಿಟಲ್‌ ಸಂವಹನ ತಂಡದ ನೇತೃತ್ವ

*2017ರಲ್ಲಿ ಭಾರತದ ಯುವ ರಾಜಕೀಯ ನಾಯಕರ ನಿಯೋಗದ ಸದಸ್ಯರಾಗಿ ಇಂಗ್ಲೆಂಡ್‌, ರಷ್ಯಾ ಹಾಗೂ ಇಸ್ರೇಲ್‌ಗೆ ಭೇಟಿ

*ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಸಂದರ್ಭದಲ್ಲಿ ಸಂಘ ಪರಿವಾರದ ಬಗ್ಗೆ ಟೀಕೆ ಮಾಡಿದ್ದ ಇತಿಹಾಸಜ್ಞ ರಾಮಚಂದ್ರ ಗುಹಾ ವಿರುದ್ಧ ದೂರು ನೀಡಿದ್ದ ತೇಜಸ್ವಿ

*2010ರಲ್ಲಿ ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ 40 ದಿನಗಳು ನಡೆಸಿದ್ದ ಜನ ಚೇತನಾ ಯಾತ್ರೆಯಲ್ಲಿ ಭಾಗಿ

ರಾಷ್ಟ್ರೀಯ ನಾಯಕರ ಜತೆ ನಂಟು: 2014ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಅವರ ಪ್ರಚಾರ ತಂಡದ ಸದಸ್ಯ

* 2018ರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರೆದಿದ್ದ ಯುವ ಮುಖಂಡರ ರಾಷ್ಟ್ರಮಟ್ಟದ ಸಭೆಯಲ್ಲಿ ಪಾಲ್ಗೊಂಡು ಚರ್ಚೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.