ADVERTISEMENT

ಕೆ.ಆರ್.ಪುರ: ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ

​ಪ್ರಜಾವಾಣಿ ವಾರ್ತೆ
Published 12 ಮೇ 2024, 16:21 IST
Last Updated 12 ಮೇ 2024, 16:21 IST
ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ
ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ   

ಕೆ.ಆರ್.ಪುರ: ಸಿದ್ದಾಪುರದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಮಹಾ ಕುಂಭಾಭಿಷೇಕ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಸುಮಾರು ಐವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ದೇವಸ್ಥಾನ ಸಿದ್ಧಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಆರಾಧ್ಯ ದೈವವಾಗಿತ್ತು. ಭಕ್ತರ ಆಶಯದಂತೆ ಜೀರ್ಣೋದ್ಧಾರ ಕಾರ್ಯ ನೆರವೇರಿತು.

ಶ್ರೀಮಹಾಗಣಪತಿ, ಶ್ರೀಕಂಠೇಶ್ವರಸ್ವಾಮಿ, ಶ್ರೀಪಾರ್ವತಿದೇವಿ, ಶ್ರೀಚಂಡಕೇಶ್ವರ, ಶ್ರೀನಂದಿ, ಶ್ರೀಕಾಲಬೈರೇಶ್ವರಸ್ವಾಮಿ, ಶ್ರೀಆಂಜನೇಯಸ್ವಾಮಿ, ಶ್ರೀನಾಗದೇವತಾ ದೇವರುಗಳ ಪ್ರತಿಷ್ಠಾಪನಾ ಕಾರ್ಯ ನಡೆಯಿತು.

ADVERTISEMENT

ಭಾನುವಾರ ಬೆಳಿಗ್ಗೆ ಪಿಂಡಿಕಾಪೂಜೆ, ರತ್ನನ್ಯಾಸ ಮೂಲ ವಿಗ್ರಹಗಳ ಪ್ರತಿಷ್ಠೆ, ಅಷ್ಟ ಬಂಧನ, ಅಗ್ನಿ ಆರಾಧನೆ, ಮೂರ್ತಿ ಹೋಮ, ಮಹಾಸಂಕಲ್ಪ, ಮಹಾಪೂರ್ಣಹುತಿ, ಪಂಚಾಮೃತ ಅಭಿಷೇಕ, ಮಹಾ ಪ್ರಸಾದ ವಿನಿಯೋಗ ನೆರವೇರಿತು.

ಕಾರ್ಯಕ್ರಮದಲ್ಲಿ ಸಿದ್ದಗಂಗಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ಮಂಜುಳಾ ಅರವಿಂದ ಲಿಂಬಾವಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮುಖಂಡರಾದ ಗಿರಿರಾಜಗೌಡ, ಗಗನಗೌಡ, ಹನುಮಂತೇಗೌಡ ಪಾಲ್ಗೊಂಡಿದ್ದರು.

ಶ್ರೀಕಂಠೇಶ್ವರಸ್ವಾಮಿಗೆ ಅಲಂಕಾರ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.