ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2023 ಹಾಗೂ 2024ನೇ ಸಾಲಿನ ವಾರ್ಷಿಕ ‘ಗೌರವ ಪ್ರಶಸ್ತಿ’ಗೆ ಹತ್ತು ಜನ ಲೇಖಕರು, ಅನುವಾದಕರನ್ನು ಆಯ್ಕೆ ಮಾಡಲಾಗಿದೆ.
ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಅವರು ಪ್ರಶಸ್ತಿ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದಾರೆ. ಕನ್ನಡ ಹಾಗೂ ಇತರ ಭಾಷೆಗಳ ನಡುವೆ ಅನುವಾದಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗಿದೆ.
2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಪ್ರೊ.ಎಚ್.ಎಸ್. ರಾಘವೇಂದ್ರರಾವ್, ವಿನಯ್ ಚೈತನ್ಯ, ನಟರಾಜ್ ಹುಳಿಯಾರ್, ದು.ಸರಸ್ವತಿ ಮತ್ತು ಎಚ್.ಎಂ. ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ.
2024ನೇ ಸಾಲಿಗೆ ಆರ್.ಕೆ. ಕುಲಕರ್ಣಿ, ಕರೀಗೌಡ ಬೀಚನಹಳ್ಳಿ, ರಾಜೇಂದ್ರ ಚೆನ್ನಿ, ಬೋಡೆ ರಿಯಾಜ್ ಅಹ್ಮದ್ ಮತ್ತು ಬಸು ಬೇವಿನಗಿಡದ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ₹50 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.
2022 ಹಾಗೂ 2023ರಲ್ಲಿ ಪ್ರಕಟವಾದ ಅನುವಾದಿತ ಕೃತಿಗಳಿಗೆ ವಿವಿಧ ವಿಭಾಗಗಳಲ್ಲಿ ನೀಡಲಾಗುವ ಪುಸ್ತಕ ಬಹುಮಾನಗಳನ್ನೂ ಪ್ರಾಧಿಕಾರ ಪ್ರಕಟಿಸಿದೆ. ಪುಸ್ತಕ ಬಹುಮಾನವು ತಲಾ ₹ 25 ಸಾವಿರ ನಗದು ಒಳಗೊಂಡಿದೆ.
2022ನೇ ಸಾಲಿನ ಪುಸ್ತಕ ಬಹುಮಾನ
ವಿಭಾಗ;ಅನುವಾದಿತ ಕೃತಿ;ಅನುವಾದಕ; ಮೂಲ ಲೇಖಕ
ಕನ್ನಡದಿಂದ ಇಂಗ್ಲಿಷ್;ತೇಜೋ ತುಂಗಭದ್ರ;ಮೈತ್ರೇಯಿ ಕರ್ನೂರು;ವಸುಧೇಂದ್ರ
ಇಂಗ್ಲಿಷ್‌ನಿಂದ ಕನ್ನಡಕ್ಕೆ;ದಿ ಚಾಯ್ಸ್;ಜಯಶ್ರೀ ಭಟ್;ಈಡಿತ್ ಎಗರ್
ಇಂಗ್ಲಿಷ್‌ನಿಂದ ಕನ್ನಡಕ್ಕೆ;ಹೆಣಹೊರುವವನ ವೃತ್ತಾಂತ;ಜಯರಾಮರಾಜೇ ಅರಸ್;ಸೈರಸ್ ಮಿಸ್ತ್ರಿ
ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ;ದೇಹವೇ ದೇಶ;ವಿಕ್ರಮವಿಸಾಜಿ;ಗರಿಮಾ ಶ್ರೀವಾಸ್ತವ
ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ;ಜಾಲ;ಶುಭಮಂಗಳ ಎಂ.ಜಿ.;ಪೆದ್ದಿಂಟಿ ಅಶೋಕ್ ಕುಮಾರ್
2023ನೇ ಸಾಲಿನ ಪುಸ್ತಕ ಬಹುಮಾನ
ಕನ್ನಡದಿಂದ ಇಂಗ್ಲಿಷ್;ಲವ್ ಆ್ಯಂಡ್ ವಾಟರ್ ಫ್ಲೋ ಟುಗೆದರ್;ಸುಕನ್ಯಾ ಕನಾರಳ್ಳಿ;ಅಗ್ರಹಾರ ಕೃಷ್ಣಮೂರ್ತಿ
ಇಂಗ್ಲಿಷ್‌ನಿಂದ ಕನ್ನಡಕ್ಕೆ;ಪಾತ್ರ ಪ್ರವೇಶ;ಶ್ರೀಧರ್ ಹೆಗ್ಗೋಡು;ಕೋನ್‌ಸ್ತಂತಿನ್ ಸ್ತಾನಿಸ್ಲಾವಸ್ಕಿಯ
ಇಂಗ್ಲಿಷ್‌ನಿಂದ ಕನ್ನಡಕ್ಕೆ;ಅಂಬೇಡ್ಕರ್ ಜಗತ್ತು’;ವಿಕಾಸ್ ಆರ್. ಮೌರ್ಯ;ಎಲೀನರ್ ಜೆಲಿಯಟ್
ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ;ನನ್ನ ಪಿತಾಮಹ ಮಹಾತ್ಮಾ ಗಾಂಧಿ’;ಎಸ್.ಜಿ. ಭಾಗ್ವತ್;ಸುಮಿತ್ರಾಗಾಂಧಿ ಕುಲಕರ್ಣಿ
ಇಂಗ್ಲಿಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ;ತೌಲನಿಕ ಧರ್ಮ ದರ್ಶನ;ತೋಂಟದ ಸಿದ್ಧರಾಮ ಸ್ವಾಮೀಜಿ;ಯಾಕೂಬ್ ಮಸೀಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.