ADVERTISEMENT

ಸಂಸ್ಕೃತ ಪ್ರಸಾರಗೊಂಡಲ್ಲಿ ಸಂಸ್ಕೃತಿ ಸುಭದ್ರ: ಥಾವರಚಂದ್ ಗೆಹಲೋತ್

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 13:10 IST
Last Updated 9 ಸೆಪ್ಟೆಂಬರ್ 2021, 13:10 IST
ಸಮಾರಂಭದಲ್ಲಿ ‘ಸಂಸ್ಕೃತ ಗ್ರಂಥ ಪುರಸ್ಕಾರ’ ಪ್ರದಾನ ಮಾಡಲಾಯಿತು. (ಕುಳಿತವರು ಎಡದಿಂದ) ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ. ಕೊಟ್ರೇಶ್, ಪ್ರೊ. ರಾಮಚಂದ್ರ ಭಟ್ ಕೋಟೆಮನೆ, ಥಾವರಚಂದ್ ಗೆಹಲೋತ್, ಪ್ರೊ.ಕೆ.ಇ. ದೇವನಾಥನ್, (ನಿಂತವರು) ‘ಸಂಸ್ಕೃತ ಗ್ರಂಥ ಪುರಸ್ಕಾರ’ ಸ್ವೀಕರಿಸಿದ ಡಾ.ಎಸ್.ಐ. ಹೆಗಡೆ, ಪುಷ್ಕರದೇವ ಪೂಜಾರಿ, ವಿದ್ವಾನ್ ಕೃಷ್ಣಪ್ರಸಾದ ಜಿ., ಕೆ. ಮಹೇಶ, ಕೊಕ್ಕಡ ಅನಂತಪದ್ಮನಾಭ ಶಾಸ್ತ್ರಿ, ಪ್ರೊ.ವಿ. ಗಿರೀಶ್ ಚಂದ್ರ, ಡಾ. ವಿಜಯಲಕ್ಷ್ಮಿ ಎಚ್.ಪಿ., ಡಾ.ಬಿ.ಎಸ್. ಮಹದೇವಯ್ಯ, ಡಾ. ಅನುಪಮಾ ಬಿ., ಡಾ.ಮ. ಜಯರಾಮ, ಡಾ. ದಿದ್ದಿಗಿ ವಂಶೀಕೃಷ್ಣ, ಡಾ. ವಿಶ್ವನಾಥ ಹೆಗಡೆ, ಡಿ. ಗಣಪತಿ ಶಾಸ್ತ್ರಿ, ಡಾ. ಸುನಂದಾ ಗುರಪ್ಪ ಭೂಪಾಳಿ ಹಾಗೂ ಪ್ರೊ. ಶ್ರೀನಿವಾಸ ವರಖೇಡಿ ಇದ್ದರು – ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಭಾರತೀಯ ಸಂಸ್ಕೃತಿ ಹಾಗೂ ಪುರಾತನ ಭಾಷೆಯಾದ ಸಂಸ್ಕೃತ ಒಂದಕ್ಕೊಂದು ನಿಕಟ ಸಂಬಂಧ ಹೊಂದಿವೆ. ದೇಶದ ಸಂಸ್ಕೃತಿ ಸುಭದ್ರಗೊಳ್ಳಬೇಕಾದರೆ ಸಂಸ್ಕೃತದ ಪ್ರಚಾರ ನಡೆಯಬೇಕು’ ಎಂದುರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಗುರುವಾರ ಹಮ್ಮಿಕೊಂಡ ಸಮಾರಂಭದಲ್ಲಿ ‘ಸಂಸ್ಕೃತ ಮಹೋತ್ಸವ’ವನ್ನು ಉದ್ಘಾಟಿಸಿದ ಅವರು, ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 15 ಮಂದಿಗೆ ‘ಸಂಸ್ಕೃತ ಗ್ರಂಥ ಪುರಸ್ಕಾರ’ ಪ್ರದಾನ ಮಾಡಿದರು.

‘ಸಂಸ್ಕೃತವು ವಿಶ್ವದ ಹಲವು ಭಾಷೆಗಳ ತಾಯಿ. ಹೇರಳ ಭಾಷಾ ಸಂಪನ್ಮೂಲವನ್ನು ಹೊಂದಿರುವ ಸಂಸ್ಕೃತವನ್ನು ಸಂಕುಚಿತ ದೃಷ್ಟಿಕೋನದಿಂದ ನೋಡುವ ಮನೋಭಾವ ತೊಲಗಬೇಕು. ಭಾಷೆಯು ಸರ್ವವ್ಯಾಪಿ, ಸರ್ವಸ್ಪರ್ಶಿಯಾದಲ್ಲಿ ದೇಶದ ಸಂಸ್ಕೃತಿಯೂ ಶ್ರೀಮಂತಗೊಳ್ಳುತ್ತದೆ. ಹಾಗಾಗಿ, ಈ ಭಾಷೆಯ ಪ್ರಸಾರಕ್ಕೆ ವಿದ್ವಾಂಸರು ಹಾಗೂ ವಿಶ್ವವಿದ್ಯಾಲಯ ಶ್ರಮಿಸಬೇಕು’ ಎಂದರು.

ADVERTISEMENT

‘ಸಂಸ್ಕೃತವು ಪರಿಪೂರ್ಣ ವ್ಯಾಕರಣವನ್ನು ಹೊಂದಿದೆ. ಕಂಪ್ಯೂಟರ್‌ ಭಾಷೆಗಳನ್ನು ಅಭಿವೃದ್ಧಿಪಡಿಸುವಲ್ಲಿಯೂ ಈ ಭಾಷೆ ನೆರವಾಗಿದೆ. ‘ವಸುದೈವ ಕುಟುಂಬಕಂ’ ಪರಿಕಲ್ಪನೆಯ ಹಿಂದೆಯೂ ಈ ಭಾಷೆಯ ಪ್ರಭಾವವಿದೆ. ಈ ಭಾಷೆ ಹಾಗೂ ಸಂಸ್ಕೃತಿಯ ಪ್ರಸಾರಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ. ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಲಿವೆ’ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಭಟ್ ಕೋಟೆಮನೆ, ‘ಸರ್ವರ ಕಲ್ಯಾಣ ಸಂಸ್ಕೃತದ ಆಶಯ. ಕನ್ನಡದ ವೈಜ್ಞಾನಿಕ ಹಾಗೂ ವೈಚಾರಿಕ ಸಾಹಿತ್ಯಕ್ಕೆ ಸಂಸ್ಕೃತದ ಕೊಡುಗೆ ಮಹತ್ವದ್ದು. ಸಂಸ್ಕೃತ ವಿಶ್ವವಿದ್ಯಾಲಯವು ಬೋಧನೆಯ ಜೊತೆಗೆ ಸಂಶೋಧನೆಯನ್ನೂ ಕೈಗೊಳ್ಳಬೇಕು’ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಪತಿಪ್ರೊ.ಕೆ.ಇ. ದೇವನಾಥನ್, ‘ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶನದಂತೆ ವಿಶ್ವವಿದ್ಯಾಲಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.