ರಾಜರಾಜೇಶ್ವರಿನಗರ: ಲಗ್ಗೆರೆಯ ಮುನೇಶ್ವರ ಬಡಾವಣೆಯಲ್ಲಿ ಮೂರು ಹೊಂಗೆ ಮರಗಳಿಗೆ ಕಿಡಿಗೇಡಿಗಳು ಆ್ಯಸಿಡ್ ಹಾಕಿದ್ದಾರೆ.
ದುಷ್ಕರ್ಮಿಗಳು ಹಂತ ಹಂತವಾಗಿ ಮರದ ಬುಡಗಳಿಗೆ(ಬೇರುಗಳಿಗೆ) ರಾತ್ರೋರಾತ್ರಿ ಆ್ಯಸಿಡ್ ಹಾಕುತ್ತಿರುವುದರಿಂದ ಮರಗಳು ಒಣಗುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೆಲವರು ನಿವೇಶನ, ಮನೆಗಳಿಗೆ ತೊಂದರೆಯಾಗುತ್ತದೆ ಎಂದು ಮರಗಳನ್ನು ಕೊಲ್ಲುತ್ತಿದ್ದಾರೆ. ಇವರು ಮನುಷ್ಯರಲ್ಲ ಕ್ರೂರಿ, ಸ್ವಾರ್ಥಿಗಳಾಗಿದ್ದಾರೆ ಎಂದು ದೂರಿದರು.
ಲಗ್ಗೆರೆ ವಾರ್ಡ್‍ನ ಸುತ್ತಮುತ್ತ ಅನೇಕ ಕಾರ್ಖಾನೆ ಮತ್ತು ಗಾರ್ಮೆಂಟ್ಸ್, ಸಣ್ಣ ಕೈಗಾರಿಕೆಗಳಿಂದ ಈ ವ್ಯಾಪ್ತಿಯ ಎಲ್ಲ ಬಡಾವಣೆಗಳ ಜನರಿಗೆ ಶುದ್ದ ಗಾಳಿ ಸಿಗಲಿ ಎಂಬ ಉದ್ದೇಶದಿಂದ ಅಂದಿನ ಪಾಲಿಕೆ ಸದಸ್ಯರಾಗಿದ್ದ ಮಂಜುಳ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಗಿಡ ನೆಡಲಾಗಿತ್ತು. ಅವುಗಳು ಬೆಳೆದು ಮರಗಳಾಗಿವೆ.
ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಂದ್ರೇಗೌಡ ಆಗ್ರಹಿಸಿದರು.
ಮೂರು ಮರಗಳು ಒಣಗಿ ಹೋಗಿವೆ. ಈ ಬಗ್ಗೆ ದೂರು ದಾಖಲಿಸಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಬಿಬಿಎಂಪಿ ವಲಯ ವಿಭಾಗದ ಉಪ ಅರಣ್ಯಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.