ADVERTISEMENT

‘ದಿ ರಾಮೇಶ್ವರ ಕೆಫೆ’ ಬಾಂಬ್‌ ಸ್ಪೋಟ: ಶಂಕಿತನ ಎನ್‌ಐಎ ಕಸ್ಟಡಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 22:30 IST
Last Updated 3 ಏಪ್ರಿಲ್ 2024, 22:30 IST
<div class="paragraphs"><p>ದಿ ರಾಮೇಶ್ವರ ಕೆಫೆ </p></div>

ದಿ ರಾಮೇಶ್ವರ ಕೆಫೆ

   

ಬೆಂಗಳೂರು: ‘ದಿ ರಾಮೇಶ್ವರ ಕೆಫೆ’ ಬಾಂಬ್‌ ಸ್ಪೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದ ಶಂಕಿತ ಮುಜಾಮೀಲ್ ಷರೀಫ್‌ನ ಎನ್‌ಐಎ ಕಸ್ಟಡಿ ಅಂತ್ಯವಾಗಿದ್ದು, ಬುಧವಾರ ಆತನನ್ನು ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರು ಪಡಿಸಲಾಯಿತು.

ಶಂಕಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು. ಮಾರ್ಚ್‌ 28ರಂದು ಶಂಕಿತನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.

ADVERTISEMENT

ತಲೆಮರೆಸಿಕೊಂಡಿರುವ ಶಂಕಿತರಾದ ಮುಸಾವೀರ್ ಹುಸೇನ್ ಶಬೀಬ್ ಹಾಗೂ ಅಬ್ದುಲ್ ಮತೀನ್ ತಾಹಾನ ಸೂಚನೆ ಮೇರೆಗೆ ಬಾಂಬ್‌ ತಯಾರಿಸಲು ಷರೀಫ್‌ ಕಚ್ಚಾ ಸಾಮಗ್ರಿ ಪೂರೈಸುತ್ತಿದ್ದ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು.

ವಿಚಾರಣೆಯಲ್ಲಿ ಅಬ್ದುಲ್ ಮತೀನ್ ತಾಹಾ ಸೂಚನೆ ಮೇರೆಗೆ ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಸ್ಫೋಟಕ್ಕೆ ಷರೀಫ್‌ ಸಂಚು ರೂಪಿಸಿದ್ದ ಎಂಬುದು ಗೊತ್ತಾಗಿದೆ. ಈ ಹಿಂದೆ ನಡೆದ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಪೋಟದ ಪ್ರಯೋಗ ಹಾಗೂ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲೂ ಈತ ಸಹಕಾರ ನೀಡಿದ್ದ. ಈ ಸಹಾಯಕ್ಕಾಗಿ ತಲೆಮರೆಸಿಕೊಂಡಿರುವ ಶಂಕಿತರಿಂದ ಹಣ ಪಡೆದುಕೊಂಡಿದ್ದ. ಅದಕ್ಕೆ ಪೂರಕ ಸಾಕ್ಷ್ಯಾಧಾರಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.

‘ಮುಸಾವೀರ್ ಹುಸೇನ್ ಶಬೀಬ್ ಹಾಗೂ ಅಬ್ದುಲ್ ಮತೀನ್ ತಾಹಾ ಇರುವ ಸ್ಥಳದ ಬಗ್ಗೆ ಷರೀಫ್‌ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.