ಪೀಣ್ಯ ದಾಸರಹಳ್ಳಿ: ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಸರ್ಕಾರ ಹಾಗೂ ಆಯೋಗ ಸದಾ ಸಿದ್ಧವಿದೆ ಎಂದು ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ತಿಳಿಸಿದರು.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್‌ಗೆ ಭೇಟಿ ನೀಡಿ, ಮಹಿಳಾ ನೌಕರರಿಗೆ ಕಾರ್ಖಾನೆಗಳಲ್ಲಿ ಭದ್ರತೆ ಪರೀಶಿಲಿಸಿದರು.
ಕಾರ್ಮಿಕ ಇಲಾಖೆಯ ಯೋಜನೆಗಳನ್ನು ಕಂಪನಿಯು ಮಹಿಳಾ ನೌಕರರಿಗೆ ಸರಿಯಾಗಿ ಒದಗಿಸುತ್ತಿದೆಯೇ ಎಂಬ ಬಗ್ಗೆ ಮಹಿಳಾ ನೌಕರರಿಂದ ಮಾಹಿತಿ ಪಡೆದರು.
‘ಲೈಂಗಿಕ ದೌರ್ಜನ್ಯಕ್ಕೊಳಗಾದರೆ ಸಂತ್ರಸ್ತೆಯರು ಯಾವುದೇ ಭಯವಿಲ್ಲದೇ ಮುಂದೆ ಬಂದು ಹೇಳಿಕೆ ನೀಡಬೇಕು. ನಿಮಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಹಿಳಾ ಆಯೋಗ ಸಹಾಯಕ್ಕೆ ನಿಲ್ಲಲಿದೆ’ ಎಂದು ಧೈರ್ಯ ತುಂಬಿದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳು, ರಾಜಗೋಪಾಲನಗರ ಹಾಗೂ ಬಾಗಲಗುಂಟೆ ಪೊಲೀಸರು, ಕಾಂಗ್ರೆಸ್ ಮುಖಂಡರಾದ ಹರೀಶ್ ಪಾರ್ಥ, ಬಿ.ಎಂ. ಜಗದೀಶ್, ರಾಮಾಂಜಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.