ಬೆಂಗಳೂರು: ಜೊಮಾಟೊ ಡೆಲಿವರಿ ಬಾಯ್ ಜಾಕೆಟ್ ಧರಿಸಿದ್ದ ಯುವಕನೊಬ್ಬ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಬಸಾಪುರದಲ್ಲಿನ ಮಳಿಗೆಯೊಂದರಿಂದ ಬ್ಯಾಗ್ ಕದ್ದೊಯ್ದ ಪ್ರಸಂಗ ನಡೆದಿದೆ.
ಈ ಕುರಿತ ವಿಡಿಯೊ ಒಂದನ್ನು Karnataka Portfolio ಎಂಬ ಖಾತೆ ಎಕ್ಸ್ ನಲ್ಲಿ ಹಂಚಿಕೊಂಡಿದೆ.
ಬಸಾಪುರದಲ್ಲಿನ ಗ್ರ್ಯಾಂಡ್ ಮಾರ್ಟ್ ಮುಂದೆ ಭದ್ರತಾ ಘಟಕದಲ್ಲಿ ಇಟ್ಟಿದ್ದ ಗ್ರಾಹಕರ ಬ್ಯಾಗ್ ಅನ್ನು ಜೊಮಾಟೊ ಡೆಲಿವರಿ ಬಾಯ್ ಜಾಕೆಟ್ ಧರಿಸಿದ್ದ ಯುವಕ ಹೊಂಚು ಹಾಕಿ ಕದ್ದೊಯ್ದಿದ್ದಾನೆ. ಈ ವಿಡಿಯೊ ಮಾರ್ಟ್ನ ಸಿಸಿಟಿವಿಯಲ್ಲಿ ದಾಖಲಾಗಿದೆ.
ವಿಡಿಯೊವನ್ನು Karnataka Portfolio ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದು ಕ್ರಮಕ್ಕೆ ಆಗ್ರಹಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಪ್ರಕರಣವನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.