ADVERTISEMENT

ಸಂವಿಧಾನ ಅರಿತವರಿಗೆ ಗೊಂದಲ ಇರಲ್ಲ: ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 16:01 IST
Last Updated 13 ಜುಲೈ 2024, 16:01 IST
<div class="paragraphs"><p>ನಗರದಲ್ಲಿ ಶನಿವಾರ ನಡೆದ ‘ಸಂವಿಧಾನ ಓದು–ಭಾಷಣ ತರಬೇತಿ ಶಿಬಿರ’ದಲ್ಲಿ ವಕೀಲ ಅನಂತ ನಾಯಕ್‌, ಲೇಖಕಿ ಎಂ.ಎಸ್. ಆಶಾದೇವಿ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮತ್ತು ಲೇಖಕ ರಾಜಪ್ಪ ದಳವಾಯಿ ಪಾಲ್ಗೊಡಿದ್ದರು</p></div>

ನಗರದಲ್ಲಿ ಶನಿವಾರ ನಡೆದ ‘ಸಂವಿಧಾನ ಓದು–ಭಾಷಣ ತರಬೇತಿ ಶಿಬಿರ’ದಲ್ಲಿ ವಕೀಲ ಅನಂತ ನಾಯಕ್‌, ಲೇಖಕಿ ಎಂ.ಎಸ್. ಆಶಾದೇವಿ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಮತ್ತು ಲೇಖಕ ರಾಜಪ್ಪ ದಳವಾಯಿ ಪಾಲ್ಗೊಡಿದ್ದರು

   

- ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಂವಿಧಾನವನ್ನು ಅರ್ಥ ಮಾಡಿಕೊಂಡವರಿಗೆ ಗೊಂದಲ ಇರುವುದಿಲ್ಲ. ಸಂಕಷ್ಟ, ಕ್ಲಿಷ್ಟ ಸಂದರ್ಭಗಳಲ್ಲಿಯೂ ಅವರು ಖಚಿತವಾದ ನಿರ್ಧಾರ ಕೈಗೊಳ್ಳಬಲ್ಲರು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ADVERTISEMENT

‘ಸಂವಿಧಾನ ಓದು ಅಭಿಯಾನ–ಕರ್ನಾಟಕ’ ಎರಡು ದಿನ ಹಮ್ಮಿಕೊಂಡಿರುವ ‘ಸಂವಿಧಾನ ಓದು–ಭಾಷಣ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ನ್ಯಾಯ ಎಂದರೆ ಮೀಸಲಾತಿ, ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡುವುದೇ ಜಾತ್ಯತೀತ ತತ್ವ ಎಂದು ಹಲವರು ಭಾವಿಸಿಕೊಂಡಿದ್ದಾರೆ. ಮೀಸಲಾತಿಯು ಸಾಮಾಜಿಕ ನ್ಯಾಯದ ಒಂದು ಅಣು ಅಷ್ಟೇ. ಮಹಿಳೆಯರು, ವೃದ್ಧರು, ಕೃಷಿಕರು, ಕಾರ್ಮಿಕರು, ಶೋಷಿತರ ಹಿತ ಕಾಪಾಡುವುದೇ ಸಾಮಾಜಿಕ ನ್ಯಾಯ’ ಎಂದು ಹೇಳಿದರು.

‘ಸಂವಿಧಾನವನ್ನು ಒಪ್ಪಿಕೊಂಡವರಲ್ಲಿಯೇ ಗೊಂದಲಗಳಿವೆ. ಅವು ನಿವಾರಣೆಯಾಗದೇ ಜನರಿಗೆ ಏನೂ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪುಗಳು, ನಮ್ಮೆಲ್ಲರ ತೀರ್ಮಾನಗಳು ಪ್ರಜಾಸತ್ತಾತ್ಮಕವಾಗಿವೆಯೇ? ಸಾಮಾಜಿಕ ನ್ಯಾಯಪರ ಇದೆಯೇ? ಜಾತ್ಯತೀತವಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು’ ಎಂದು ಹೇಳಿದರು.

‘ಜನರಿಗೆ ಅರ್ಥವಾಗುವ ರೀತಿಯಲ್ಲಿ ಸಂವಿಧಾನದ ವಿಚಾರಗಳನ್ನು ಮುಟ್ಟಿಸಬೇಕು. ವಿಚಾರ ಗೊತ್ತಿಲ್ಲದೇ ಮಾತನಾಡಲು ಸಾಧ್ಯವಿಲ್ಲ. ಮಾಹಿತಿ ಸಂಗ್ರಹಿಸಬೇಕು. ಕಠಿಣ ಪೂರ್ವತಯಾರಿ ಮಾಡಬೇಕು. ಸತತ ಅಭ್ಯಾಸ ಮಾಡಿಕೊಳ್ಳಬೇಕು. ಸಿಕ್ಕಿದ ಅವಕಾಶ ಬಳಸಿಕೊಳ್ಳಬೇಕು. ನಿತ್ಯ ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಓದಬೇಕು. ಆಗ ಜನರೊಂದಿಗೆ ಉತ್ತಮ ಸಂವಹನ ನಡೆಸಲು ಸಾಧ್ಯ’ ಎಂದು ಪ್ರತಿಪಾದಿಸಿದರು.

ಆಡಳಿತದಲ್ಲಿ ಧರ್ಮದ ಹಸ್ತಕ್ಷೇಪ ಇಲ್ಲದಂತೆ ನೋಡಿಕೊಳ್ಳುವುದು ಧರ್ಮಾಧಿಕಾರಿಗಳ ಫರ್ಮಾನುಗಳಿಗೆ ತಲೆಬಾಗದೇ ಆಡಳಿತ ನಡೆಸುವುದು ಜಾತ್ಯತೀತ ತತ್ವ 
ಎಚ್.ಎನ್. ನಾಗಮೋಹನದಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.