ADVERTISEMENT

ಬೆಂಗಳೂರು: ಮೂವರು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳ ಸೆರೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:23 IST
Last Updated 22 ಅಕ್ಟೋಬರ್ 2024, 15:23 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಗ್ರಾಹಕರು ಹಾಗೂ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಮೂವರು ವಿದೇಶಿ ಡ್ರಗ್ಸ್‌ ಪೆಡ್ಲರ್‌ಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಸಿಬ್ಬಂದಿ ಬಂಧಿಸಿದೆ.

ADVERTISEMENT

ಎಮೆಕಾ ಹೆನ್ರಿ ಅನುಸಿ (51), ಫ್ರೈಡೇ ಒಕೊರೊ ಜೋಸೆಫ್‌ (38) ಹಾಗೂ ಇಮಾನ್ಯುಯೆಲ್ ಕೋಪಿ (37)ಬಂಧಿತರು

ಬಂಧಿತ ಆರೋಪಿಗಳಿಂದ ₹9 ಲಕ್ಷ ಮೌಲ್ಯದ 82 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಇನ್ನೂ ಹಲವರು ಮಾದಕವಸ್ತು ಪೂರೈಕೆ ನಡೆಸುತ್ತಿರುವ ಮಾಹಿತಿ ಇದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮೂವರು ವಿದೇಶಿ ಪ್ರಜೆಗಳು ಡ್ರಗ್ಸ್ ಪೆಡ್ಲಿಂಗ್‌ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಬಂದಿತ್ತು. ಅವರನ್ನು ಬಂಧಿಸಲಾಗಿದೆ. ಮೂವರೂ ವೈದ್ಯಕೀಯ ಹಾಗೂ ಪ್ರವಾಸಿ ವೀಸಾದ ಮೇಲೆ ದೆಹಲಿಗೆ ಬಂದಿದ್ದರು. ನಂತರ, ಬೆಂಗಳೂರಿಗೆ ಬಂದು ನೆಲಸಿದ್ದರು. ಬೆಂಗಳೂರಿನಲ್ಲಿ ನೆಲಸಿದ್ದ ಆಫ್ರಿಕಾ ಮೂಲದವರಿಂದ ಮಾದಕ ವಸ್ತು ಖರೀದಿಸಿ ಪರಿಚಯವಿದ್ದ ಗ್ರಾಹಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ಮಾರುತ್ತಿದ್ದರು. 1 ಗ್ರಾಂ ಕ್ರಿಸ್ಟಲ್‌ಗೆ ₹8 ಸಾವಿರದಿಂದ ₹10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರ ಹೇಳಿದರು.

‘ಕೊತ್ತನೂರು ಹಾಗೂ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ನಿಗ್ರಹ ಕಾಯ್ದೆಯ ಅಡಿ (ಎನ್‌ಡಿಪಿಎಸ್‌) ದಾಖಲಾಗಿದ್ದ ಪ್ರಕರಣದಲ್ಲಿ ಈ ಪೈಕಿ ಇಬ್ಬರನ್ನು ಬಂಧಿಸಲಾಗಿತ್ತು. ಜಾಮೀನಿನ ಪಡೆದು ಬಿಡುಗಡೆಯಾದ ನಂತರ ಡ್ರಗ್ಸ್ ಪೆಡ್ಲಿಂಗ್‌ ದಂಧೆಗೆ ಇಳಿದಿದ್ದರು’ ಎಂದು ಪೊಲೀಸರು ಹೇಳಿದರು.

ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.