ADVERTISEMENT

ಸಿಸಿಟಿವಿ ಧ್ವಂಸ, ವ್ಯಕ್ತಿ ಮೇಲೆ ಹಲ್ಲೆ: ಮೂವರ ಸೆರೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:01 IST
Last Updated 3 ಅಕ್ಟೋಬರ್ 2024, 16:01 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಪ್ರಜಾವಾಣಿ ವಾರ್ತೆ

ADVERTISEMENT

ಬೆಂಗಳೂರು: ಗೋದಾಮಿನ ಎದುರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ವ್ಯಕ್ತಿಯ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಅಡಿ ಮೂವರು ಆರೋಪಿಗಳನ್ನು ಡಿ.ಜೆ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೈಯದ್‌ ಸಾತ್‌, ಉಸ್ಮಾನ್‌ ಖಾನ್‌ ಹಾಗೂ ಸಲ್ಮಾನ್‌ ಬಂಧಿತರು.

ಚಿನ್ಮಯಿ ಲೇಔಟ್‌ನ ಅರುಣ್‌ಕುಮಾರ್ ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಹಲ್ಲೆ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

‘ಸೆ.30ರಂದು ಶಾಂಪೂರದ ಮುನಿವೀರಪ್ಪ ಲೇಔಟ್‌ನ ಪಟೇಲಪ್ಪ ಆವರಣದಲ್ಲಿದ್ದ ಗೋದಾಮಿಗೆ ಐವರು ಆರೋಪಿಗಳು ನುಗ್ಗಿ ನಿಲುಗಡೆ ಮಾಡಿದ್ದ ಬೈಕ್‌ ಅನ್ನು ಕಳವು ಮಾಡಲು ಯತ್ನಿಸಿದ್ದರು. ಕೃತ್ಯ ಎಸಗುತ್ತಿದ್ದುದ್ದನ್ನು ಕಂಡ ಅರುಣ್‌ಕುಮಾರ್ ಅವರು ಆರೋಪಿಗಳನ್ನು ಪ್ರಶ್ನಿಸಿದ್ದರು. ಆಗ ಆರೋಪಿಗಳು ಬೈಕಿಗೆ ಬೆಂಕಿ ಹಾಕುವುದಾಗಿ ಬೆದರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೇ ಗೋದಾಮಿನ ಬಳಿ ಬಿಬಿಎಂಪಿಯವರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದರು. ಅರುಣ್‌ಕುಮಾರ್ ಮೇಲೆಯೂ ಹಲ್ಲೆ ನಡೆಸಿದ್ದರು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.