ADVERTISEMENT

ಟಿಎಚ್‌ಇ ರ‍್ಯಾಂಕಿಂಗ್‌: ಅಮೃತ ವಿವಿ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 14:15 IST
Last Updated 14 ಜೂನ್ 2024, 14:15 IST
ಅಮೃತ ವಿಶ್ವ ವಿದ್ಯಾಪೀಠಂ
ಅಮೃತ ವಿಶ್ವ ವಿದ್ಯಾಪೀಠಂ   

ಬೆಂಗಳೂರು: ಅಮೃತನಗರದಲ್ಲಿರುವ ಅಮೃತ ವಿಶ್ವ ವಿದ್ಯಾಪೀಠಂ ಸತತ ನಾಲ್ಕನೇ ವರ್ಷ ‘ಟೈಮ್ಸ್‌ ಹೈಯರ್‌ ಎಜುಕೇಷನ್’ ಇಂಪ್ಯಾಕ್ಟ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಪಡೆದಿದೆ. ಅಮೃತ ವಿಶ್ವವಿದ್ಯಾಲಯವು ವಿಶ್ವದ ಅಗ್ರ 100 ಶಿಕ್ಷಣ ಸಂಸ್ಥೆಗಳಲ್ಲಿ ಒಂದು. 

‘ಟೈಮ್ಸ್‌ ಹೈಯರ್‌ ಎಜುಕೇಷನ್’ ಈ ವರ್ಷ ನಡೆಸಿದ ಇಂಪ್ಯಾಕ್ಟ್‌ ರ‍್ಯಾಂಕಿಂಗ್‌ ಪ್ರಕ್ರಿಯೆಯಲ್ಲಿ 125 ದೇಶಗಳ 2,152 ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್‌ಡಿಜಿ) ವಿಶ್ವವಿದ್ಯಾಲಯಗಳ ಕೊಡುಗೆಗಳು ಮತ್ತು ಸಮಗ್ರ ಮೌಲ್ಯಮಾಪನ ಮತ್ತು ಸುಸ್ಥಿರತೆಗೆ ಸಂಶೋಧನೆ, ಮುಂದಾಳತ್ವ, ತಲುಪುವ ವ್ಯಾಪ್ತಿ, ಬೋಧನೆಗಳ ಬದ್ಧತೆಯನ್ನು ಆಧರಿಸಿ ರ‍್ಯಾಂಕ್ ನೀಡಲಾಗುತ್ತದೆ.

ಜೂನ್ 10ರಿಂದ 13ರ ವರೆಗೆ ಬ್ಯಾಂಕಾಕ್‌ನಲ್ಲಿ ನಡೆದ ‘ಟೈಮ್ಸ್‌ ಹೈಯರ್‌ ಎಜುಕೇಷನ್’ ಗ್ಲೋಬಲ್ ಸಸ್ಟೈನಬಲ್ ಡೆವಲಪ್‌ಮೆಂಟ್ ಕಾಂಗ್ರೆಸ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಅಮೃತ ವಿಶ್ವ ವಿದ್ಯಾಪೀಠಂನಲ್ಲಿನ ಕಾರ್ಯತಂತ್ರದ ಉಪಕ್ರಮಗಳು, ಸಂಶೋಧನೆ ಮತ್ತು ಹೊಸತನದ ಬಗ್ಗೆ ಮನೀಶಾ ವಿ. ರಮೇಶ್ ವಿಚಾರ ಮಂಡಿಸಿದರು. 

ADVERTISEMENT

ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಕೈಗೆಟಕುವ ಮತ್ತು ಶುದ್ಧ ಶಕ್ತಿ, ಉದ್ಯಮ, ನಾವೀನ್ಯ ಮತ್ತು ಮೂಲಸೌಕರ್ಯ ಮತ್ತಿತರ ವಿಭಾಗಗಳಲ್ಲಿ ಅಮೃತ ವಿಶ್ವ ವಿದ್ಯಾಪೀಠಂ ಉತ್ತಮ ಸಾಧನೆಗಳನ್ನು ತೋರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.