ಬೆಂಗಳೂರು: 'ಜಗತ್ತಿನಲ್ಲಿ ಸ್ವಾರ್ಥ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರೂವಿಶ್ವಮಾನವ ಪರಿಕಲ್ಪನೆ
ಯತ್ತ ಸಾಗುವ ಅಗತ್ಯವಿದೆ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಗುರುವಾರ ಪಿಇಎಸ್ ಪದವಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ‘ಕುವೆಂಪು ವಿಚಾರಧಾರೆ ವಿಶ್ವಮಾನವ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, 'ಜಗತ್ತಿನ ಅನೇಕ ದುರ್ಘಟನೆಗಳಿಗೆ ಮನುಷ್ಯನ ಸ್ವಾರ್ಥವೇ ಕಾರಣ’ ಎಂದು ವಿಶ್ಲೇಷಿಸಿದರು.
‘ನಾನು ವಿಶ್ವಮಾನವ ಪ್ರಶಸ್ತಿಗೆ ಅರ್ಹನೋ ಅಲ್ಲವೋ ಗೊತ್ತಿಲ್ಲ. ಆದರೂ, ನನ್ನ ಮೇಲಿನ ಅಭಿಮಾನಕ್ಕೆ ಕರ್ನಾಟಕ ವಿಶ್ವಮಾನವ ಸಂಸ್ಥೆ ಈ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಭಾವಿಸಿದ್ದೇನೆ’ ಎಂದರು.
ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ದೊರೆಸ್ವಾಮಿ, ‘ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆ
ಯಂತೆಯೇ ನಡೆದವರು ಎಂ.ಎನ್.ವೆಂಕಟಾಚಲಯ್ಯ. ಇಳಿವಯಸ್ಸಿನಲ್ಲೂ ಅವರಲ್ಲಿರುವ ಉತ್ಸಾಹ, ಆಸಕ್ತಿ ಮತ್ತು ಬದುಕಿನ ಕ್ರಮ ವಿದ್ಯಾರ್ಥಿಗಳಿಗೆ ಆದರ್ಶ ಮತ್ತು ಅನುಕರಣೀಯ’ ಎಂದರು.
ಶಾಸಕ ರವಿ ಸುಬ್ರಹ್ಮಣ್ಯ, ‘ಕೆಲವೊಮ್ಮೆ ಪ್ರಶಸ್ತಿಗಳಿಂದ ವ್ಯಕ್ತಿಗೆ ಗೌರವ ಸಿಗುತ್ತದೆ. ಇನ್ನು ಕೆಲವೊಮ್ಮೆ ವ್ಯಕ್ತಿಗಳಿಂದಾಗಿ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ. ಎಂ.ಎನ್.ವೆಂಕಟಾಚಲಯ್ಯ ಅವರಿಂದ ವಿಶ್ವಮಾನವ ಪ್ರಶಸ್ತಿಗೂ ಗೌರವ ಸಂದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.