ಬೆಂಗಳೂರು: ದೆಹಲಿಯ ಪ್ರಸಾರ ಭಾರತಿ ಹಾಗೂ ಆಕಾಶವಾಣಿ ನಡೆಸುವ ಭಾವಗೀತೆ ವಿಭಾಗದ ಅತ್ಯುನ್ನತ ಶ್ರೇಣಿಯ ಪರೀಕ್ಷೆಯಲ್ಲಿ ನೀಡಲಾಗುವ ‘ಟಾಪ್ ಗ್ರೇಡ್ ಕಲಾವಿದೆ’ ಗೌರವಕ್ಕೆ ಗಾಯಕಿ ಪ್ರೇಮಲತಾ ದಿವಾಕರ್ ಭಾಜನರಾಗಿದ್ದಾರೆ.
ಕಳೆದ ವರ್ಷ ಆಕಾಶವಾಣಿ ನಡೆಸಿದ ಪರೀಕ್ಷೆಯಲ್ಲಿ ಪ್ರೇಮಲತಾ ಭಾಗವಹಿಸಿದ್ದರು. ಕಳೆದ ವಾರ ಫಲಿತಾಂಶ ಪ್ರಕಟವಾಗಿದೆ. ಕನ್ನಡ ಸುಗಮ ಸಂಗೀತದ ಭಾವಗೀತೆ ಗಾಯಕರಲ್ಲಿ ಉನ್ನತ ಶ್ರೇಣಿ ಪಡೆದವರಲ್ಲಿ ಪ್ರೇಮಲತಾ ಕೂಡಾ ಒಬ್ಬರು. ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕಜಿ.ಕೆ.ರವೀಂದ್ರಕುಮಾರ್ ಪ್ರಮಾಣಪತ್ರ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.