ADVERTISEMENT

ಸಾರ್ವಜನಿಕ ಸಭೆ: ಸಂಚಾರದಲ್ಲಿ ಮಾರ್ಪಾಡು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:17 IST
Last Updated 23 ನವೆಂಬರ್ 2024, 23:17 IST
<div class="paragraphs"><p>ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್.ಜಿ</p></div>
   

ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್.ಜಿ

ಬೆಂಗಳೂರು: ಪುಲಕೇಶಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆ ಈದ್ಗಾ ಖುದ್ದೂಸ್‌ ಸಾಹೇಬ್ ಮೈದಾನದಲ್ಲಿ (ಓಲ್ಡ್‌ ಹಜ್ ಕ್ಯಾಂಪ್) ನವೆಂಬರ್ 24ರಂದು ಸಾರ್ವಜನಿಕ ಸಭೆ ಆಯೋಜಿಸಿರುವುದರಿಂದ ಮೈದಾನದ ಸುತ್ತಮುತ್ತ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.

ಸಭೆಯಲ್ಲಿ ಅಂದಾಜು ಎರಡು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ವಾಹನ ದಟ್ಟಣೆ ಸಾಧ್ಯತೆಯಿದೆ. ಹಾಗಾಗಿ ಸುಗಮ ಸಂಚಾರದ ದೃಷ್ಟಿಯಿಂದ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪರ್ಯಾಯ ಮಾರ್ಗ: ಮಿಲ್ಲರ್ಸ್ ರಸ್ತೆಯ ಹೇನ್ಸ್ ರಸ್ತೆ ಕಡೆಗೆ ಹೋಗುವ ವಾಹನ ಸವಾರರು ಮಿಲ್ಲರ್ಸ್‌ ರಸ್ತೆಯಲ್ಲಿ ಬಲ ತಿರುವು ಪಡೆದು ಕಂಟೋನ್ಮೆಂಟ್ ರೈಲು ನಿಲ್ದಾಣ ಮುಂಭಾಗ ಕಂಟೋನ್ಮೆಂಟ್‌ ರಸ್ತೆಯಲ್ಲಿ ನೇರವಾಗಿ ಸಾಗಿ ಬಂಬೂ ಬಜಾರ್‌ ಜಂಕ್ಷನ್, ನೇತಾಜಿ ರಸ್ತೆ ಮೂಲಕ ಪುಲಕೇಶಿ ನಗರದ ಕಡೆಗೆ ಸಂಚರಿಸಬೇಕು.

ಹೇನ್ಸ್ ರಸ್ತೆ ಕಡೆಯಿಂದ ಮಿಲ್ಲರ್ಸ್ ರಸ್ತೆ ಕಡೆಗೆ ಹೋಗುವ ವಾಹನ ಸವಾರರು ಹೇನ್ಸ್ ರಸ್ತೆ ಜಂಕ್ಷನ್‌ನಿಂದ ಹೇನ್ಸ್ ರಸ್ತೆಯಲ್ಲಿ ನೇರವಾಗಿ ಸಾಗಿ ಧನಕೋಟಿ ರಸ್ತೆಯಲ್ಲಿ ಬಲಕ್ಕೆ ತಿರುಗಿ ಎ.ಎಂ.ರಸ್ತೆ, ಬಂಬೂ ಬಜಾರ್, ಕಂಟೋನ್ಮೆಂಟ್‌ ರಸ್ತೆ, ಕ್ವೀನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಜಯಮಹಲ್ ರಸ್ತೆ ಮಾರ್ಗವಾಗಿ ಹೋಗಬೇಕು.

ನಂದಿ ದುರ್ಗ ರಸ್ತೆ ಕಡೆಯಿಂದ ಹೇನ್ಸ್ ರಸ್ತೆ ಕಡೆಗೆ ಹೋಗುವ ವಾಹನಗಳು ನಂದಿದುರ್ಗ ರಸ್ತೆ ಕ್ರಾಸ್‌ ರಸ್ತೆಯಲ್ಲಿ ಎಡಕ್ಕೆ ತಿರುಗಿ ಬೆನ್ಸನ್ ಕ್ರಾಸ್ ರಸ್ತೆಯಲ್ಲಿ ನೇರವಾಗಿ ಸಾಗಿ ಬೋರ್ ಬಂಕ್ ರಸ್ತೆಯಲ್ಲಿ ಎಡ ತಿರುವು ಪಡೆಯಬೇಕು. ನಂತರ ಪಾಟರಿ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಪುಲಿಕೇಶಿನಗರದ ಕಡೆಗೆ ಸಂಚರಿಸಬೇಕು.

ಪಾರ್ಕಿಂಗ್ ನಿರ್ಬಂಧ: ಕಂಟೋನ್ಮೆಂಟ್‌ ರಸ್ತೆ, ಸೇಂಟ್‌ ಜಾನ್ಸ್‌ ಚರ್ಚ್ ರಸ್ತೆ, ಮಿಲ್ಲರ್ಸ್‌ ರಸ್ತೆ, ನಂದಿ ದುರ್ಗ ರಸ್ತೆ, ಹೇನ್ಸ್ ರಸ್ತೆ, ನೇತಾಜಿ ರಸ್ತೆ, ಎಚ್‌.ಎಂ.ರಸ್ತೆ, ಎಂ.ಎಂ ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ.

ಪಾರ್ಕಿಂಗ್‌ಗೆ ಸ್ಥಳಾವಕಾಶ: ಕಾರ್ಯಕ್ರಮಕ್ಕೆ ಬರುವವರಿಗೆ ವಾಹನಗಳ ನಿಲುಗಡೆಗೆ ಅರಮನೆ ಮೈದಾನದ ಸರ್ಕಸ್‌ ಮೈದಾನ, ಅರಮನೆ ಮೈದಾನದ ಚಾಮರವಜ್ರ ಗೇಟ್‌, ಜಯಮಹಲ್ ಬಿಬಿಎಂಪಿ ಮೈದಾನ, ಮೌಂಟ್ ಕಾರ್ಮೆಲ್ ಕಾಲೇಜು ಮೈದಾನ, ಕಮಲಾಬಾಯಿ ಶಾಲಾ ಮೈದಾನ, ಕ್ಲಾರೆನ್ಸ್‌ ಮೈದಾನ, ಈಸ್ಟ್‌ ಫುಟ್‌ಬಾಲ್ ಮೈದಾನ, ಅಣ್ಣಸ್ವಾಮಿ ಮೈದಾನ ಹಾಗೂ ಚಾರ್ಲ್ಸ್‌ ಮೈದಾನದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.