ADVERTISEMENT

ಮಾರತ್ತಹಳ್ಳಿ ಸೇತುವೆ ಬಳಿ ದಟ್ಟಣೆ: ಪರ್ಯಾಯ ಮಾರ್ಗ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:12 IST
Last Updated 3 ಅಕ್ಟೋಬರ್ 2024, 16:12 IST
<div class="paragraphs"><p>ಬೆಂಗಳೂರಿನ ಮಾರತ್ತಹಳ್ಳಿ ಹೊರವರ್ತುಲ ಜಂಕ್ಷನ್ ಬಳಿ ಹಳೆ ಎಚ್‌ಎಎಲ್ ರಸ್ತೆಯಲ್ಲಿ ವಾಹನ ದಟ್ಟಣೆ. </p></div>

ಬೆಂಗಳೂರಿನ ಮಾರತ್ತಹಳ್ಳಿ ಹೊರವರ್ತುಲ ಜಂಕ್ಷನ್ ಬಳಿ ಹಳೆ ಎಚ್‌ಎಎಲ್ ರಸ್ತೆಯಲ್ಲಿ ವಾಹನ ದಟ್ಟಣೆ.

   

ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್.ಜಿ

ಬೆಂಗಳೂರು: ವರ್ತೂರು ರಸ್ತೆಯ ಮಾರತ್ತಹಳ್ಳಿ ಸೇತುವೆ ಬಳಿ ವಾಹನ ದಟ್ಟಣೆ ತೀವ್ರವಾಗಿದ್ದು, ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿರುವ ಎಚ್‌ಎಎಲ್‌ ವಿಮಾನ ನಿಲ್ದಾಣ ಸಂಚಾರ ಪೊಲೀಸ್‌ ಠಾಣಾ ಪೊಲೀಸರು, ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಗುರುವಾರದಿಂದಲೇ ಈ ಸಂಚಾರ ಮಾರ್ಗ ಬದಲಾವಣೆ ಜಾರಿಗೆ ಬಂದಿದೆ. 

ADVERTISEMENT

ಹೊರವರ್ತುಲ ರಸ್ತೆಯ ಕೆಎಲ್‌ಎಂ ಸರ್ವಿಸ್‌ರಸ್ತೆಯಿಂದ ಕುಂದಲಹಳ್ಳಿ ಗೇಟ್‌ ಕಡೆಗೆ ವಾಹನ ಸಂಚಾರವನ್ನು ಪ್ರತಿನಿತ್ಯ ಬೆಳಿಗ್ಗೆ 7ರಿಂದ 11ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 10 ಗಂಟೆ ವರೆಗೆ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ: ಹೊರವರ್ತುಲ ರಸ್ತೆಯ ಕೆಎಲ್‌ಎಂ ಸರ್ವಿಸ್‌ರಸ್ತೆ ಕಡೆಯಿಂದ ಕುಂದಲಹಳ್ಳಿ ಗೇಟ್‌ ಕಡೆಗೆ ಸಂಚರಿಸುವ ಲಘು ವಾಹನಗಳು, ಆಕಾಶ್‌ ವಿಹಾರ್ ವಸತಿಗೃಹದ ಮುಂಭಾಗದಲ್ಲಿ ‘ಯು–ಟರ್ನ್’ ಪಡೆದು ಮಾರತ್ತಹಳ್ಳಿ ಸೇತುವೆ ಮೂಲಕ ಕುಂದಲಹಳ್ಳಿ ಗೇಟ್‌ ಕಡೆಗೆ ಸಂಚರಿಸಬಹುದು. ಭಾರಿ ವಾಹನಗಳು, ತುಳಸಿ ಚಿತ್ರಮಂದಿರದ ಜಂಕ್ಷನ್‌ನಲ್ಲಿ ‘ಯು–ಟರ್ನ್‌’ ಪಡೆದು ಮಾರತ್ತಹಳ್ಳಿ ಸೇತುವೆ ಮೂಲಕ ಕುಂದಲಹಳ್ಳಿ ಗೇಟ್‌ ಕಡೆಗೆ ಸಂಚರಿಸಬಹುದಾಗಿದೆ.

ಇದೇ ಸಂದರ್ಭದಲ್ಲಿ ಪಾದಚಾರಿಗಳು ರಸ್ತೆ ದಾಟುವುದನ್ನು ನಿರ್ಬಂಧಿಸಲಾಗಿದೆ. ವರ್ತೂರು ರಸ್ತೆ ಮತ್ತು ಹಳೇ ವಿಮಾನ ನಿಲ್ದಾಣ ರಸ್ತೆ ದಾಟಲು ಪಾದಚಾರಿಗಳು ಸ್ಕೈವಾಕ್‌ ಬಳಕೆ ಮಾಡುವಂತೆ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕುಲದೀಪ್‌ ಕುಮಾರ್ ಆರ್‌. ಜೈನ್‌ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.