ADVERTISEMENT

ಸುಗಮ ಸಂಚಾರ: ಐಐಎಸ್ಸಿ–ಪೊಲೀಸರ ನಡುವೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 20:27 IST
Last Updated 15 ಡಿಸೆಂಬರ್ 2023, 20:27 IST
   

ಬೆಂಗಳೂರು: ನಗರದಲ್ಲಿ ದಟ್ಟಣೆ ತಗ್ಗಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಜೊತೆಗೆ ಸಂಚಾರ ಪೊಲೀಸರು ಒಪ್ಪಂದ ಮಾಡಿಕೊಂಡಿದ್ದಾರೆ.

ಹೆಚ್ಚುತ್ತಿರುವ ದಟ್ಟಣೆ ನಿಯಂತ್ರಣ, ರಸ್ತೆ ಸುರಕ್ಷತೆ ತರಬೇತಿ ಹಾಗೂ ಸಂಚಾರ ವ್ಯವಸ್ಥೆಯ ಬಲವರ್ಧನೆಗೆ ಸಂಬಂಧಪಟ್ಟ ಒಪ್ಪಂದ ಇದಾಗಿದೆ. ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ಅವರು ಐಐಎಸ್ಸಿ ಪ್ರತಿನಿಧಿಗಳ ಜೊತೆ ಸಭೆ ನಡೆಸಿ, ಒಪ್ಪಂದಕ್ಕೆ ಸಹಿ ಹಾಕಿದರು.

ಎಂ.ಎನ್. ಅನುಚೇತ್ ಮಾತನಾಡಿ, ‘ಸಂಚಾರ ಸಂಬಂಧಿತ ದತ್ತಾಂಶವನ್ನು ವಿಶ್ಲೇಷಿಸಿ ದಟ್ಟಣೆಗೆ ಪರಿಹಾರ ಒದಗಿಸುವುದರ ಜೊತೆಗೆ ಸುರಕ್ಷತಾ ಕ್ರಮಗಳ ಬಗ್ಗೆ ಐಐಎಸ್ಸಿ ಸಲಹೆ ನೀಡಲಿದೆ. ಸಂಚಾರ ಸಿಬ್ಬಂದಿಗೆ ತರಬೇತಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆಯೂ ಜ್ಞಾನ ಒದಗಿಸಲಿದೆ’ ಎಂದರು.

ADVERTISEMENT

ಐಐಎಸ್ಸಿಯ ಪ್ರೊ. ಅಬ್ದುಲ್ ರವೂಪ್ ಪಿಂಜಾರಿ, ‘ಸುಗಮ ಸಂಚಾರಕ್ಕೆ ಅಗತ್ಯವಿರುವ ಯೋಜನೆಗಳನ್ನು ಸಿದ್ಧಪಡಿಸಿ ನೀಡಲು ನಮ್ಮ ಸಂಸ್ಥೆ ಸಹಕರಿಸಲಿದೆ’ ಎಂದರು.

ಡಿಸಿಪಿ ಕುಲದೀಪ್ ಕುಮಾರ್ ಜೈನ್, ಐಐಎಸ್ಸಿಯ ಪ್ರೊ. ವಿಜಯ್ ಕೋವಳ್ಳಿ, ಡಾ ರಘುಕೃಷ್ಣಪುರಂ ಹಾಗೂ ರಕ್ಷಿತ್ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.