ADVERTISEMENT

ಹೆಜ್ಜಾಲ–ಕೆಂಗೇರಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿ: ರೈಲು ಸಂಚಾರ 2 ತಾಸು ವಿಳಂಬ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 4:47 IST
Last Updated 10 ಜುಲೈ 2024, 4:47 IST
<div class="paragraphs"><p>ರೈಲು ಸಂಚಾರ ವಿಳಂಬದಿಂದಾಗಿ ನಿಲ್ದಾಣದಲ್ಲೇ ಕಾದು ಕುಳಿತ&nbsp;ಪ್ರಯಾಣಿಕರು</p><p></p></div>

ರೈಲು ಸಂಚಾರ ವಿಳಂಬದಿಂದಾಗಿ ನಿಲ್ದಾಣದಲ್ಲೇ ಕಾದು ಕುಳಿತ ಪ್ರಯಾಣಿಕರು

   

-ಪ್ರಜಾವಾಣಿ ಚಿತ್ರ

ADVERTISEMENT

ರಾಮನಗರ: ತಾಲ್ಲೂಕಿನ ಹೆಜ್ಜಾಲ –ಕೆಂಗೇರಿ ನಡುವಣ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ವಿಳಂಬದಿಂದಾಗಿ, ಬೆಂಗಳೂರು–ಮೈಸೂರು ಮಾರ್ಗದ ರೈಲುಗಳು ಬುಧವಾರ ಬೆಳಿಗ್ಗೆ ಹಳಿಗಳಲ್ಲೇ ಸುಮಾರು ಒಂದೂವರೆ ತಾಸು ನಿಂತವು. ಇದರಿಂದಾಗಿ, ಪ್ರಯಾಣಿಕರು ಪರದಾಡಬೇಕಾಯಿತು. ತಮ್ಮ ಕೆಲಸ– ಕಾರ್ಯಗಳಿಗೆ ಹೋಗಲು ತಡವಾಗಿದ್ದರಿಂದ ಪ್ರಯಾಣಿಕರು ಬಸ್‌ ನಿಲ್ದಾಣದತ್ತ ಹೆಜ್ಜೆ ಹಾಕಿದರು.

ಬೆಳಿಗ್ಗೆ 7.30ರಿಂದ 9 ಗಂಟೆವರೆಗೆ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಯಿತು. ಇದರಿಂದಾಗಿ ರೈಲುಗಳು ಚನ್ನಪಟ್ಟಣ, ರಾಮನಗರ ಹಾಗೂ ಬಿಡದಿ ನಿಲ್ದಾಣದಲ್ಲೇ ಬೀಡು ಬಿಟ್ಟವು. ಇನ್ನೇನು ಕೆಲ ಹೊತ್ತಿನಲ್ಲೇ ರೈಲು ಹೊರಡಲಿದೆ ಎಂದುಕೊಂಡ ಪ್ರಯಾಣಿಕರು ಕಾದು ಹೈರಾಣಾದರು. ಕಡೆಗೆ ವಿಧಿ ಇಲ್ಲದೆ ರೈನಿನಿಂದಿಳಿದು ಬಸ್ ಸೇರಿದಂತೆ ಇತರ ವಾಹನಗಳನ್ನು ಏರಿ ಹೊರಟರು.

‘ಹೆಜ್ಜಾಲ–ಕೆಂಗೇರಿ ಮಧ್ಯೆ ರೈಲ್ವೆ ಅಂಡರ್‌ಪಾಸ್ ಕಾಮಗಾರಿಯನ್ನು ಮಂಗಳವಾ ರಾತ್ರಿ 10 ಗಂಟೆಯಿಂದಲೇ ಆರಂಭಿಸಲಾಗಿತ್ತು. ಸಿಮೆಂಟ್ ಬ್ಲಾಕ್‌ಗಳ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳು ಬೆಳಿಗ್ಗೆ 7ರ ಹೊತ್ತಿಗೆ ಮುಗಿಯಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಕೆಲಸ ವಿಳಂಬವಾಯಿತು. ಹಾಗಾಗಿ, ರೈಲುಗಳ ಸಂಚಾರ ವಿಳಂಬವಾಯಿತು’ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿ ನಿಮಿತ್ತ ನೆನ್ನೆ ರಾತ್ರಿಯಿಂದಲೇ ಕಾಮಗಾರಿ ಅವಧಿಯಲ್ಲಿ ಬೆಂಗಳೂರು–ಮೈಸೂರು ಮಾರ್ಗದ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಕಾಮಗಾರಿ ವಿಳಂಬವಾಗಿದ್ದರಿಂದ ಬೆಳಿಗ್ಗೆ ಸಂಚರಿಸುವ ರೈಲುಗಳಿಗೆ ತೊಂದರೆಯಾಯಿತು. ಕಾಮಗಾರಿ ಮುಗಿಯುವವರೆಗೆ ರೈಲುಗಳು ನಿಲ್ದಾಣದಲ್ಲೇ ಬೀಡು ಬಿಟ್ಟಿದ್ದವು . ಮುಗಿದ ಬಳಿಕ ತೆರಳಿದವು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.