ಬೆಂಗಳೂರು: ಎತ್ತಿನಹೊಳೆ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ದೊಡ್ಡಬೆಲೆ ಮತ್ತು ಮುದ್ದಲಿಂಗನಹಳ್ಳಿ ನಿಲ್ದಾಣಗಳ ನಡುವೆ ತಾತ್ಕಾಲಿಕ ಗರ್ಡರ್ ಅಳವಡಿಕೆ ಕಾಮಗಾರಿ ನಡೆಸಲು ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನು ಒಂದು ವಾರ ರದ್ದು ಮಾಡಲಾಗಿದೆ. ಕೆಲವು ರೈಲುಗಳು ಬೇರೆ ಮಾರ್ಗಗಳಲ್ಲಿ ಸಂಚರಿಸಲಿವೆ.
ತುಮಕೂರು–ಚಾಮರಾಜನಗರ ಪ್ರಯಾಣಿಕರ ರೈಲು, ಚಾಮರಾಜನಗರ–ಮೈಸೂರು ಪ್ರಯಾಣಿಕರ ರೈಲು, ಚಿಕ್ಕಮಗಳೂರು–ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ–ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು, ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು, ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ರೈಲುಗಳನ್ನು ಜೂನ್ 6ರಿಂದ 13ರವರೆಗೆ ರದ್ದು ಮಾಡಲಾಗಿದೆ.
ಜೂನ್ 6ರಿಂದ 13ರವರೆಗೆ ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ಮತ್ತು ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲುಗಳು ಗೊಲ್ಲಹಳ್ಳಿ-ತುಮಕೂರು ಮಧ್ಯೆ ಭಾಗಶಃ ರದ್ದುಗೊಳಿಸಲಾಗಿದೆ. ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು, ಧಾರವಾಡ- ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಕೆಎಸ್ಆರ್ ಬೆಂಗಳೂರು-ಅರಸಿಕೆರೆ ನಡುವೆ ಭಾಗಶಃ ರದ್ದು ಮಾಡಲಾಗಿದೆ. ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಯಶವಂತಪುರ-ತುಮಕೂರು ಸಂಚಾರ ಇರುವುದಿಲ್ಲ. ಶಿವಮೊಗ್ಗ ಪಟ್ಟಣ-ತುಮಕೂರು ಮೆಮು ರೈಲು ಗುಬ್ಬಿ-ತುಮಕೂರು ನಡುವೆ ರದ್ದುಗೊಳಿಸಲಾಗಿದೆ.
ಜೂನ್ 4 ಮತ್ತು 11ರಂದು ಸಂಚರಿಸುವ ಬಿಕಾನೇರ್-ಯಶವಂತಪುರ್ ಎಕ್ಸ್‌ಪ್ರೆಸ್ ರೈಲು 1ಗಂಟೆ 55 ನಿಮಿಷ ತಡವಾಗಿ ಸಂಚರಿಸಲಿದೆ. ಜೂನ್ 6 ಮತ್ತು 13ರಂದು ಸಂಚರಿಸುವ ಯಶವಂತಪುರ–ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು 80 ನಿಮಿಷ ತಡವಾಗಲಿದೆ. ಕೆಎಸ್ಆರ್ ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು 30 ನಿಮಿಷ, ಚಾಮರಾಜನಗರ-ತುಮಕೂರು ಪ್ರಯಾಣಿಕರ ರೈಲು 2 ಗಂಟೆ ತಡವಾಗಲಿದೆ.
ಜೂನ್ 6 ಮತ್ತು 13ರಂದು ಸಂಚರಿಸುವ ಯಶವಂತಪುರ - ವಾಸ್ಕೋಡಗಾಮ ರಯಳು, ಜೂನ್ 12ರಂದು ಪ್ರಯಾಣಿಸುವ ತುಮಕೂರು-ಬಾಣಸವಾಡಿ ರೈಲುಗಳು 60 ನಿಮಿಷ ತಡವಾಗಿ ಹೊರಡಲಿವೆ.
ಜೂನ್ 4 ಮತ್ತು 11ರಂದು ಸಂಚರಿಸುವ ಅಜ್ಮೀರ್-ಮೈಸೂರು ವಿಶೇಷ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮೂಲಕ ಸಂಚರಿಸಲಿದ್ದು, ತುಮಕೂರು ನಿಲ್ದಾಣದ ನಿಲುಗಡೆಯನ್ನು ರದ್ದು ಮಾಡಲಾಗಿದೆ.
ಜೂನ್ 5 ಮತ್ತು 12ರಂದು ಸಂಚರಿಸುವ ವಾಸ್ಕೋ-ಡ-ಗಾಮಾ - ಯಶವಂತಪುರ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮೂಲಕ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ರೈಲು ನಿಲ್ದಾಣಗಳಲ್ಲಿ ನಿಲುಗಡೆ ರದ್ದು ಮಾಡಲಾಗಿದೆ.
ಜೂನ್ 6 ಮತ್ತು 13ರಂದು ಸಂಚರಿಸುವ ಮೈಸೂರು-ವಾರಾಣಸಿ ರೈಲು, ಯಶವಂತಪುರ - ಜೈಪುರ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮೂಲಕ ಸಂಚರಿಸಲಿದ್ದು, ತಿಪಟೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
ಮೈಸೂರು - ಉದಯಪುರ ನಗರ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮೂಲಕ ಸಂಚರಿಸಲಿದೆ.
ಮೈಸೂರು - ಬೆಳಗಾವಿ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮೂಲಕ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.