ADVERTISEMENT

ಬೆಂಗಳೂರು: ಪದ ಕಟ್ಟುವ ಸ್ಪರ್ಧೆ 30ಕ್ಕೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 21:06 IST
Last Updated 10 ನವೆಂಬರ್ 2024, 21:06 IST
   

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಇಂಗ್ಲಿಷ್‌ ಪದಗಳಿಗೆ ಕನ್ನಡದಲ್ಲೇ ಸುಲಭವಾಗಿ ಪದ ಕಟ್ಟುವ ಸ್ಪರ್ಧೆಯನ್ನು ಮುನ್ನೋಟ ಟ್ರಸ್ಟ್ ಇದೇ 30ರಂದು ಹಮ್ಮಿಕೊಂಡಿದೆ.

ಮೊದಲ ಮೂರು ವಿಜೇತರಿಗೆ ಕ್ರಮವಾಗಿ ₹10 ಸಾವಿರ, ₹7 ಸಾವಿರ ಹಾಗೂ ₹5 ಸಾವಿರ ನಗದು ಬಹುಮಾನ ದೊರೆಯಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ವೇಗದ ಬದಲಾವಣೆ ಅರಗಿಸಿಕೊಂಡು, ಹೊಸ ಕಾಲದ ಎಲ್ಲ ಅರಿವಿನ ಕವಲುಗಳನ್ನು ಕನ್ನಡದಲ್ಲೂ ಕಟ್ಟಿಕೊಳ್ಳಲು ಕನ್ನಡವು ಶಕ್ತಿ ಪಡೆದುಕೊಳ್ಳಬೇಕು. ಕನ್ನಡದ ಪರಿಸರಕ್ಕೆ ಒಗ್ಗುವ ರೂಪದಲ್ಲಿ ಪದ ಕಟ್ಟಣೆಯ ಒಂದು ದೊಡ್ಡ ಅಭಿಯಾನ ರೂಪುಗೊಳ್ಳಬೇಕು ಎಂದು ಟ್ರಸ್ಟ್‌ನ ಪ್ರಶಾಂತ ಸೊರಟೂರ ಹಾಗೂ ವಸಂತ ಶೆಟ್ಟಿ ತಿಳಿಸಿದ್ದಾರೆ.

ಈ ಸ್ಪರ್ಧೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಓದುತ್ತಿರುವ, ಕೆಲಸ ಮಾಡುತ್ತಿರುವವರೂ
ಪಾಲ್ಗೊಳ್ಳಬಹುದು. ವಿವರಕ್ಕೆ www.tilipada.org ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.