ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ನವೆಂಬರ್ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 3,321 ಪ್ರಯಾಣಿಕರಿಂದ ₹ 6.68 ಲಕ್ಷ ದಂಡ ವಸೂಲಿ ಮಾಡಲಾಗಿದೆ.
ಬಿಎಂಟಿಸಿ ತನಿಖಾ ತಂಡದಲ್ಲಿನ ಅಧಿಕಾರಿಗಳು ನವೆಂಬರ್‌ನಲ್ಲಿ 16,421 ಬಸ್ ಟ್ರಿಪ್‌ಗಳಲ್ಲಿ ತನಿಖೆ ನಡೆಸಿದ್ದರು. ಸಂಸ್ಥೆಯ 1,062 ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಮೀಸಲಾದ ಆಸನಗಳಲ್ಲಿ ಪ್ರಯಾಣಿಸಿದ 438 ಪುರುಷ ಪ್ರಯಾಣಿಕರಿಗೆ ₹ 43,800 ದಂಡ ವಿಧಿಸಲಾಗಿದೆ.
ಪ್ರಯಾಣಿಕರು ಟಿಕೆಟ್ ಅಥವಾ ಬಸ್ ಪಾಸ್ ಪಡೆದು ಪ್ರಯಾಣಿಸಬೇಕು. ಮಹಿಳೆಯರಿಗೆ ಮೀಸಲಾದ ಆಸನಗಳಲ್ಲಿ ಪುರುಷರು ಕುಳಿತುಕೊಳ್ಳಬಾರದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.