ADVERTISEMENT

ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 13 ಮೇ 2022, 19:24 IST
Last Updated 13 ಮೇ 2022, 19:24 IST

ಬೆಂಗಳೂರು: ಬ್ಯಾಂಕಿಂಗ್, ರೈಲ್ವೆ, ವಿಮೆ, ಹಣಕಾಸು ಸಂಸ್ಥೆಗಳು, ಖಾಸಗಿ ಕ್ಷೇತ್ರದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಅದನ್ನು ತಪ್ಪಿಸಿ ಅಲ್ಲಿಯೂ ಕನ್ನಡಿಗರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ ನೀಡಲು ಬ್ರೆಟ್ ಸಲ್ಯೂಷನ್ಸ್ ಸಂಸ್ಥೆ ಮುಂದಾಗಿದೆ.

ಜೆಎಸ್‌ಎಸ್‌ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಫಾರ್ ಕಾಂಪಿಟೇಟಿವ್ ಎಕ್ಸಾಮಿನೇಷನ್‌(ಜೆಎಸ್‌ಎಸ್‌ಟಿಐಸಿಇ) ಜತೆ ಬ್ರೆಟ್ ಸಲ್ಯೂಷನ್ ಒಪ್ಪಂದ ಮಾಡಿಕೊಂಡಿದೆ.

ಕರ್ಣಾಟಕ ಬ್ಯಾಂಕಿನಲ್ಲಿ ನೌಕರರ ಹುದ್ದೆಗಳಿಗೆ ಜೂನ್‌ನಲ್ಲಿ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿ ನಡೆಸಿ ತರಬೇತಿ ನೀಡಲು ಮುಂದಾಗಿದೆ.

ADVERTISEMENT

‘ಜಯನಗರದ 8ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್‌ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಫಾರ್ ಕಾಂಪಿಟೇಟಿವ್ ಎಕ್ಸಾಮಿನೇಷನ್‌ನಲ್ಲಿ ತರಗತಿಗಳು ಮೇ 21ರಿಂದ ಆರಂಭವಾಗಲಿವೆ. ಉದ್ಯೋಗಾಕಾಂಕ್ಷಿಗಳು ಈ ತರಬೇತಿ ಪಡೆದುಕೊಳ್ಳಬೇಕು’ ಎಂದು ಜೆಎಸ್‌ಎಸ್‌ಟಿಐಸಿಇನ ನಿರ್ದೇಶಕ ಎಂ.ಬಿ.ದ್ಯಾಬೆರಿ ಮತ್ತು ಬ್ರೆಟ್ಸ್‌ನ ಅಧ್ಯಕ್ಷ ಅಶೋಕ್ ಹೆಗ್ಡೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.