ADVERTISEMENT

ಚೀನಾ ವಸ್ತು ಆಮದು ನಿರ್ಬಂಧ: ಟಿಟಿಕೆ ಪ್ರೆಸ್ಟೀಜ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:57 IST
Last Updated 16 ಜುಲೈ 2020, 16:57 IST

ಬೆಂಗಳೂರು: ಅಡುಗೆಮನೆ ಉಪಕರಣಗಳ ಪ್ರಮುಖ ಕಂಪನಿ ಟಿಟಿಕೆ ಪ್ರೆಸ್ಟೀಜ್‌, ಚೀನಾದಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

‘ಭಾರತದಲ್ಲಿಯೇ ಉತ್ಪಾದಿಸಿ ಅಭಿಯಾನದ ಅಡಿ ಮೂರು ವರ್ಷಗಳಿಂದ ಕಂಪನಿಯು ಸ್ಥಳೀಯವಾಗಿ ಉತ್ಪನ್ನಗಳನ್ನು ಉತ್ಪಾದಿಸಲು ಆದ್ಯತೆ ನೀಡುತ್ತಿದೆ. ಚೀನಾದಿಂದ ಶೇ 10ರಷ್ಟು ಉತ್ಪನ್ನಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಚೀನಾ–ಭಾರತ ನಡುವೆ ಸಂಘರ್ಷ ನಡೆದಿದ್ದರಿಂದ ನಾವು ಆಮದು ನೀತಿಯನ್ನು ಬದಲಾಯಿಸಿಕೊಂಡಿದ್ದೇವೆ’ ಎಂದು ಕಂಪನಿಯು ಪ್ರಕಟಣೆಯಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT