ADVERTISEMENT

ಬೆಂಗಳೂರು | ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗ: ಸುರಂಗ ಕೊರೆಯುವ ಕಾರ್ಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 13:27 IST
Last Updated 30 ಅಕ್ಟೋಬರ್ 2024, 13:27 IST
<div class="paragraphs"><p>‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ</p></div>

‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ

   

ಬೆಂಗಳೂರು: ಸುರಂಗ ಕೊರೆಯುವ ಯಂತ್ರ ‘ಭದ್ರಾ’ ಕೊರೆಯುವ ಕಾರ್ಯ ಮುಗಿಸಿ ಬುಧವಾರ ಹೊರಬಂದಿದೆ. ಅಲ್ಲಿಗೆ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಂಡಿದೆ.

ಏಪ್ರಿಲ್‌ 2ರಂದು ಕೆ.ಜಿ.ಹಳ್ಳಿ ನಿಲ್ದಾಣದಿಂದ ಸುರಂಗ ಕೊರೆಯುವ ಕಾರ್ಯವನ್ನು ‘ಭದ್ರಾ’ ಆರಂಭಿಸಿತ್ತು. ಬುಧವಾರ ನಾಗವಾರ ನಿಲ್ದಾಣದಲ್ಲಿ ಹೊರಬಂದಿದೆ.

ADVERTISEMENT

9 ಸುರಂಗ ಕೊರೆಯುವ ಯಂತ್ರಗಳಲ್ಲಿ ‘ವರದ’, ‘ಅವನಿ’, ‘ಊರ್ಜ್ವಾ’, ‘ವಿಂಧ್ಯಾ’, ‘ಲವಿ’, ‘ವಮಿಕ’, ‘ರುದ್ರ’ ಮತ್ತು ‘ತುಂಗಾ’ ಯಂತ್ರಗಳು ಕೆಲಸ ಮುಗಿಸಿದ್ದವು. ಕೊನೇ ಹಂತದ ಕೊರೆಯುವ ಕಾರ್ಯವನ್ನು ’ಭದ್ರಾ’ ನಡೆಸುತ್ತಿತ್ತು.

ಹಂತ– 2ರ ಯೋಜನೆಯಡಿ ರೀಚ್‌–6 ಮಾರ್ಗ ಇದಾಗಿದ್ದು, ಕಾಳೇನ ಅಗ್ರಹಾರದಿಂದ ನಾಗವಾರವರೆಗೆ 21.76 ಕಿ.ಮೀ.ನ ಈ ಮಾರ್ಗದಲ್ಲಿ 13.76 ಕಿ.ಮೀ. ಉದ್ದದ ಸುರಂಗ ಮಾರ್ಗ ಇದೆ. ಎರಡು ಪಥಗಳು ಸೇರಿ 20.992 ಕಿಲೋ ಮೀಟರ್‌ ಸುರಂಗ ನಿರ್ಮಾಣವಾಗಬೇಕಿತ್ತು. ಕೊರೆಯುವ ಕಾರ್ಯ ಮುಗಿದಿದ್ದು, ಸುರಂಗದ ಒಳಗೆ 12 ನಿಲ್ದಾಣಗಳ ನಿರ್ಮಾಣ ಸಹಿತ ಉಳಿದ ಕಾಮಗಾರಿಗಳು ಇನ್ನು ನಡೆಯಲಿದೆ.

ಗುಲಾಬಿ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ ನಾಲ್ಕನೇ ಹಂತ, ಜಯದೇವ ಆಸ್ಪತ್ರೆ, ಸ್ವಾಗತ್‌ ರೋಡ್‌ ಕ್ರಾಸ್‌, ಡೇರಿ ಸರ್ಕಲ್‌, ಮೈಕೊ ಇಂಡಸ್ಟ್ರೀಸ್‌, ಲ್ಯಾಂಗ್‌ಫೋರ್ಡ್‌ ಟೌನ್‌, ವೆಲ್ಲಾರ, ಎಂ.ಜಿ. ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್‌, ಪಾಟರಿ ಟೌನ್‌, ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್‌ ಕಾಲೇಜು, ನಾಗವಾರದಲ್ಲಿ ಮೆಟ್ರೊ ನಿಲ್ದಾಣಗಳು ನಿರ್ಮಾಣಗೊಳ್ಳುತ್ತಿವೆ. 2025ರ ಅಂತ್ಯಕ್ಕೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.