ADVERTISEMENT

ಹಜ್‌ ಯಾತ್ರೆ: ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 23:30 IST
Last Updated 20 ಜೂನ್ 2024, 23:30 IST
<div class="paragraphs"><p>ಹಜ್‌ ಯಾತ್ರೆ ಕೈಗೊಂಡಿರುವ ವಿವಿಧ ದೇಶಗಳ ಯಾತ್ರಿಗಳು ಸೌದಿ ಅರೇಬಿಯಾದ ಮೆಕ್ಕಾದ ಬೃಹತ್‌ ಮಸೀದಿ ‘ಕಾಬಾ‘ ಶಿಲೆಗೆ ಪ್ರದಕ್ಷಿಣೆ ಹಾಕಿದರು</p></div>

ಹಜ್‌ ಯಾತ್ರೆ ಕೈಗೊಂಡಿರುವ ವಿವಿಧ ದೇಶಗಳ ಯಾತ್ರಿಗಳು ಸೌದಿ ಅರೇಬಿಯಾದ ಮೆಕ್ಕಾದ ಬೃಹತ್‌ ಮಸೀದಿ ‘ಕಾಬಾ‘ ಶಿಲೆಗೆ ಪ್ರದಕ್ಷಿಣೆ ಹಾಕಿದರು

   

– ರಾಯಿಟರ್ಸ್‌ ಚಿತ್ರ

ಬೆಂಗಳೂರು: ಈ ಸಲದ ಹಜ್‌ ವಾರ್ಷಿಕ ಯಾತ್ರೆ ಸಂದರ್ಭದಲ್ಲಿ ಅಧಿಕ ತಾಪಮಾನದಿಂದ ಬೆಂಗಳೂರಿನ ಇಬ್ಬರು ಹಜ್‌ ಯಾತ್ರಿಕರು ಮೃತಪಟ್ಟಿದ್ದಾರೆ.

ADVERTISEMENT

‘ಆರ್.ಟಿ. ನಗರದ ನಿವಾಸಿ ಕೌಸರ್‌ ರುಕ್ಸಾನ (70) ಹಾಗೂ ಅಮರ್ ಲೇಔಟ್‌ ನಿವಾಸಿ ಅಬ್ದಲ್‌ ಅನ್ಸಾರಿ (56) ಎಂದು ಗುರುತಿಸಲಾಗಿದೆ. ಮೆಕ್ಕಾಗಿಂತ 50 ಕಿ.ಮೀ ದೂರದ ಮಿನಾ ಎಂಬ ನಗರದಲ್ಲಿ ಇವರಿಬ್ಬರು ಮೂರು ದಿನಗಳ ಹಿಂದೆಯೇ ಮೃತಪಟ್ಟಿದ್ದಾರೆ’ ಎಂದು ಹಜ್‌ ಕಮಿಟಿ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್‌ ಮಾಹಿತಿ ನೀಡಿದರು.

‘ಅಲ್ಲಿನ ಸರ್ಕಾರ ಮೆಕ್ಕಾ ನಗರದಲ್ಲಿಯೇ ಇವರಿಬ್ಬರ ಅಂತ್ಯಕ್ರಿಯೆ ನಡೆಸಿ ಮರಣ ಪ್ರಮಾಣ ನೀಡಲಿದೆ. ಕರ್ನಾಟಕದಿಂದ ತೆರಳಿರುವ ಉಳಿದ ಹಜ್‌ ಯಾತ್ರಿಗಳು ಸುರಕ್ಷಿತವಾಗಿದ್ದಾರೆ. ಈ ಬಾರಿ ರಾಜ್ಯದಿಂದ 10,300 ಜನ ಹಜ್‌ ಯಾತ್ರೆ ತೆರಳಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.