ADVERTISEMENT

ಬೆಂಗಳೂರಿನ ಸ್ಯಾಪ್‌ ಎಂಜಿನಿಯರ್‌ಗಳಲ್ಲಿ ಎಚ್‌1ಎನ್‌1 ವೈರಾಣು ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2020, 13:45 IST
Last Updated 20 ಫೆಬ್ರುವರಿ 2020, 13:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿರುವಜರ್ಮನಿ ಮೂಲದ ‘ಸ್ಯಾಪ್’ ಸಾಫ್ಟ್‌ವೇರ್ ಕಂಪನಿಯ ಇಬ್ಬರು ಎಂಜಿನಿಯರ್‌ಗಳಲ್ಲಿ ಎಚ್‌1ಎನ್‌1 ವೈರಾಣು ಪತ್ತೆಯಾಗಿದೆ.

ಬೆಂಗಳೂರಿನ ಎಕೊವರ್ಲ್ಡ್‌ನಲ್ಲಿ ಕಾರ್ಯನಿರ್ವಹಿಸುವತನ್ನ ನೌಕರರಲ್ಲಿ ಎಚ್‌1ಎನ್‌1 ವೈರಾಣು ಪತ್ತೆಯಾದ ಹಿನ್ನೆಲೆಯಲ್ಲಿ ಕಂಪನಿಯು ಸೋಂಕು ನಿವಾರಣೆಗಾಗಿ ಭಾರತದಲ್ಲಿರುವತನ್ನೆಲ್ಲಾ ಕಚೇರಿಗಳಲ್ಲಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ.

ಮುಂದಿನ ಸೂಚನೆ ನೀಡುವವರೆಗೆ ಎಲ್ಲ ನೌಕರರು ಮನೆಗಳಿಂದಲೇ ಕೆಲಸ ಮಾಡಬೇಕು ಎಂದು ಕಂಪನಿ ಸೂಚಿಸಿದೆ.

ADVERTISEMENT

‘ನೌಕರರು ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಸ್ಯಾಪ್ ಕಾಳಜಿವಹಿಸುತ್ತದೆ. ಬೆಂಗಳೂರು, ಗುರುಗ್ರಾಮ ಮತ್ತು ಮುಂಬೈನಲ್ಲಿರುವ ಎಲ್ಲ ಸ್ಯಾಪ್‌ ಕಚೇರಿಗಳನ್ನು ಸೋಂಕು ನಿವಾರಣೆ ಕಾರ್ಯಾಚರಣೆಗಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲ ನೌಕರರಿಗೂ ಮನೆಗಳಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ’ ಎಂದು ಸ್ಯಾಪ್‌ ಇಂಡಿಯಾ ಮೂಲಗಳನ್ನು ಉಲ್ಲೇಖಿಸಿ ‘ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್‌’ ವರದಿ ಮಾಡಿದೆ.

ಎಚ್‌1ಎನ್‌1 ಅಥವಾ ಹಂದಿಜ್ವರ (ಸ್ವೈನ್ ಫ್ಲು) ಗಾಳಿಯ ಮೂಲಕ ಹರಡುತ್ತದೆ. ಕೆಮ್ಮು, ಜ್ವರ, ಗಂಟಲು ಕೆರೆತ, ನೆಗಡಿ, ತಲೆನೋವು, ಚಳಿ ಮತ್ತು ಸುಸ್ತು ಈ ರೋಗದ ಲಕ್ಷಣಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.