ಬೆಂಗಳೂರು: ‘ನಗರದ ಒಟ್ಟು ಜನಸಂಖ್ಯೆಯ ಪೈಕಿ ಶೇಕಡ 70ರಷ್ಟು ಜನ ದ್ವಿಚಕ್ರ ವಾಹನ ಬಳಸುತ್ತಾರೆ. ರಸ್ತೆಗಳಲ್ಲಿ ಬೈಕ್‌ಗಳ ಸಂಖ್ಯೆಯೇ ಹೆಚ್ಚಿರುವುದರಿಂದ ಅವುಗಳ ಅಪಘಾತದ ಪ್ರಮಾಣ ಹೆಚ್ಚುತ್ತಿದೆ’ ಎಂದುರಸ್ತೆ ಸುರಕ್ಷತೆ ಕುರಿತು ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆ ಕೈಗೊಂಡ ಪ್ರಾಥಮಿಕ ಹಂತದ ಅಧ್ಯಯನ ವರದಿ ಹೇಳಿದೆ.
ಪದ್ಮಶ್ರೀ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಸಹಯೋಗದಲ್ಲಿ ಈ ಅಧ್ಯಯನಕೈಗೊಳ್ಳಲಾಗಿದೆ.
ಸೇಫರ್ ರೋಡ್ಸ್ ಅಭಿಯಾನದ ಟೀಮ್ ಲೀಡರ್ ಪ್ರಗತಿ ಹೆಬ್ಬಾರ್ ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ‘ಹೆಚ್ಚು ಅಪಘಾತಗಳಾಗುವ ರಸ್ತೆಗಳ ಪೈಕಿ ಹೆಬ್ಬಾಳ ಮತ್ತು ಕೆ.ಆರ್.ಪುರ ರಸ್ತೆಯನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಹೆಲ್ಮೆಟ್‌ರಹಿತ ಪ್ರಯಾಣ ಹಾಗೂ ಅತೀ ವೇಗದ ಚಾಲನೆ ಇಲ್ಲಿನ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ’ ಎಂದರು.
ರಸ್ತೆ ಸುರಕ್ಷತೆ ಪ್ರಾಧಿಕಾರದ ಉಪ ನಿರ್ದೇಶಕಿ ಆಷಾ ಅಭಿಕರ್, ‘2017ಕ್ಕೆ ಹೋಲಿಸಿದರೆ, 2018ರಲ್ಲಿ ಸಂಭವಿಸಿದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.