ADVERTISEMENT

ಬೆಂಗಳೂರು | ಅನಧಿಕೃತ ಫ್ಲೆಕ್ಸ್‌ ತೆರವು: 12 ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 16:03 IST
Last Updated 12 ಜೂನ್ 2024, 16:03 IST
<div class="paragraphs"><p>ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು ( ಸಂಗ್ರಹ ಚಿತ್ರ )</p></div>

ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು ( ಸಂಗ್ರಹ ಚಿತ್ರ )

   

ಬೆಂಗಳೂರು: ನಗರದಲ್ಲಿ ‘ಜಾಹೀರಾತು ಮುಕ್ತ ಅಭಿಯಾನ’ ಆರಂಭಿಸಿರುವ ಬಿಬಿಎಂಪಿ, ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿ 12 ಎಫ್‌ಐಆರ್‌ ದಾಖಲಿಸಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಡಿ.ಕೆ ಶಿವಕುಮಾರ್ ಅವರು ಫ್ಲೆಕ್ಸ್‌, ಬ್ಯಾನರ್‌ ಕಂಡುಬಂದರೆ ಸ್ಥಳೀಯ ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ ಎಂದು ಮಂಗಳವಾರ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ವೇಗ ನೀಡಿದ್ದಾರೆ.

ADVERTISEMENT

ಜೂನ್‌ 1ರಿಂದ ಜೂನ್‌ 12ವರೆಗೆ 1259 ಫ್ಲೆಕ್ಸ್, ಬ್ಯಾನರ್, ಎಲ್‌ಇಡಿ ಹಾಗೂ ಹೋರ್ಡಿಂಗ್‌ಗಳನ್ನು ತೆರವುಗೊಳಿಸಲಾಗಿದೆ. ಆರ್.ಆರ್.ನಗರ ಹಾಗೂ ಮಹದೇವಪುರದಲ್ಲಿ ಅತಿ ಹೆಚ್ಚು ಫ್ಲೆಕ್ಸ್‌ ತೆರವುಗೊಳಿಸಲಾಗಿದ್ದರೆ, ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು 15 ದೂರುಗಳು ದಾಖಲಾಗಿವೆ. ಒಟ್ಟಾರೆ ಪೊಲೀಸ್ ಠಾಣೆಯಲ್ಲಿ 27 ದೂರುಗಳು ದಾಖಲಾಗಿದ್ದು, ಅದರಲ್ಲಿ 12 ಎಫ್‌ಐಆರ್ ದಾಖಲಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ಸಹಾಯವಾಣಿ 1533 ಅಥವಾ ಜಾಹೀರಾತು ವಿಭಾಗದ ವಾಟ್ಸ್‌ ಆ್ಯಪ್‌ 9480683939 ಗೆ ಛಾಯಾಚಿತ್ರ ಅಥವಾ ವಿಡಿಯೊ ಕಳುಹಿಸಬಹುದು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.