ADVERTISEMENT

ಬೆಂಗಳೂರು | ಬುಡಮೇಲಾಗಿ ಉರುಳಿದ ಕಟ್ಟಡ: ಒಬ್ಬರ ಮೃತದೇಹ ಪತ್ತೆ, ಐವರು ನಾಪತ್ತೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 12:21 IST
Last Updated 22 ಅಕ್ಟೋಬರ್ 2024, 12:21 IST
<div class="paragraphs"><p>ಬುಡಮೇಲಾಗಿ ಉರುಳಿದ ಕಟ್ಟಡ</p></div>

ಬುಡಮೇಲಾಗಿ ಉರುಳಿದ ಕಟ್ಟಡ

   

ಚಿತ್ರಕೃಪೆ: ಎಕ್ಸ್‌

ಬೆಂಗಳೂರು: ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬು ಸಾ ಪಾಳ್ಯದಲ್ಲಿ ನಿರ್ಮಾಣದ ಹಂತದ ಕಟ್ಟಡವೊಂದು ಮಂಗಳವಾರ ಮಧ್ಯಾಹ್ನ 3.40ರ ಸುಮಾರಿಗೆ ದಿಢೀರ್‌ ಆಗಿ ಬುಡಮೇಲಾಗಿ ಬಿದ್ದಿದ್ದು, ಕಟ್ಟಡದ ಒಳಗೆ ಸಿಲುಕಿದ್ದ ಒಬ್ಬರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಇನ್ನೂ ಐವರು ಕಾರ್ಮಿಕರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ADVERTISEMENT

‘ಒಟ್ಟು 20 ಕಾರ್ಮಿಕರು ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ನೆಲಮಹಡಿಯಲ್ಲಿ ಮಹಿಳೆ ಸೇರಿದಂತೆ ಐವರು ಕಾರ್ಮಿಕರು ಸಿಮೆಂಟ್‌ ಮಿಶ್ರಣದ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ನಾಪತ್ತೆ ಆಗಿದ್ದರು. ಕಟ್ಟಡದ ವಿವಿಧ ಭಾಗದಲ್ಲಿ ಸಿಲುಕಿದ್ದ 14 ಮಂದಿಯನ್ನು ಇದುವರೆಗೂ ರಕ್ಷಣೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.