ADVERTISEMENT

ಬೆಂಗಳೂರು: ‘ಮೆಕ್ಯಾನಿಕಲ್‌ ವರ್ಕ್‌ಶಾಪ್‌ ನಿರ್ಮಿಸಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 21:22 IST
Last Updated 17 ಡಿಸೆಂಬರ್ 2021, 21:22 IST

ಬೆಂಗಳೂರು: ‘ಶತಮಾನ ಪೂರೈಸಿರುವಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಕಟ್ಟಡಗಳ ನವೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ವೇಳೆಮೆಕ್ಯಾನಿಕಲ್ ವಿಭಾಗದ ವರ್ಕ್‌ಶಾಪ್‌ ಕಟ್ಟಡಗಳ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ’ ಎಂದು ಯುವಿಸಿಇವೆಲ್‌ವಿಷರ್ಸ್‌ ಫೋರಂ ಆರೋಪಿಸಿದೆ.

‘ಯುವಿಸಿಇ ಅಭಿವೃದ್ಧಿಗೆ ಸರ್ಕಾರ 2017–18ರ ಬಜೆಟ್‌ನಲ್ಲಿ ₹ 25 ಕೋಟಿಗಳ ಅನುದಾನ ಘೋಷಿಸಿತ್ತು. ಈಗಾಗಲೇ ₹ 16.80 ಕೋಟಿ ಮಂಜೂರು ಮಾಡಿದೆ. ಮೆಕ್ಯಾನಿಕಲ್ ವಿಭಾಗದ ವರ್ಕ್‌ಶಾಪ್‌ ಕಟ್ಟಡಗಳನ್ನು ಹೊಸ ಕಟ್ಟಡ ನಿರ್ಮಿಸುವ ಉದ್ದೇಶದಿಂದ 2018ರಲ್ಲಿ ಕೆಡವಲಾಗಿತ್ತು. ಆದರೆ, ಈವರೆಗೂ ನಿರ್ಮಿಸಿಲ್ಲ. ಆದಷ್ಟು ಬೇಗ ವರ್ಕ್‌ಶಾಪ್‌ ಕಟ್ಟಡವನ್ನು ನಿರ್ಮಿಸಬೇಕು’ ಎಂದು ಫೋರಂನ ಸಂಚಾಲಕ ಎಚ್‌.ಸುರೇಶ್‌, ಸದಸ್ಯ ಶ್ರೀಧರ್‌ ಅಗಳಾಯ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT