ADVERTISEMENT

ಯುವಿಸಿಇ ವಿದ್ಯಾರ್ಥಿನಿಗೆ ವಾರ್ಷಿಕ ₹ 58.3 ಲಕ್ಷ ವೇತನದ ಕೆಲಸ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 21:31 IST
Last Updated 24 ಜನವರಿ 2023, 21:31 IST
ಕೀರ್ತಿ
ಕೀರ್ತಿ   

ಬೆಂಗಳೂರು: ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು (ಯುವಿಸಿಇ) ವಿದ್ಯಾರ್ಥಿನಿ ಎನ್‌.ಸಿ.ಕೀರ್ತಿ ಅವರಿಗೆ ವಾರ್ಷಿಕ ₹ 58.3 ಲಕ್ಷ ಪ್ಯಾಕೇಜ್‌ನ ಉದ್ಯೋಗ ದೊರೆತಿದೆ.

ಅಮೆರಿಕದ ‘ಸೈಬರ್‌ ಸೆಕ್ಯೂರಿಟಿ ಸಿಸ್ಟಂ ಕಂಪನಿ’ಯಲ್ಲಿ ಉದ್ಯೋಗ ಪಡೆದಿರುವ ತುಮಕೂರು ಜಿಲ್ಲೆ ಮಧುಗಿರಿಯ ಕೀರ್ತಿ, ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಅಂತಿಮ ಸೆಮಿಸ್ಟರ್‌ ಓದುತ್ತಿದ್ದಾರೆ. ಇದೇ ವರ್ಷದ ಆಗಸ್ಟ್‌ನಲ್ಲಿ ಅಂತಿಮ ಪರೀಕ್ಷೆಗಳನ್ನು ಬರೆಯಲಿದ್ದಾರೆ. ಇಂಟರ್ನ್‌ಶಿಪ್‌ ಅವಧಿಯಲ್ಲೂ ₹1ಲಕ್ಷ ಅನ್ನು ಕಂಪನಿ ನೀಡಲಿದೆ.

‘ಸಿಇಟಿಯಲ್ಲಿ 4 ಸಾವಿರ ರ‍್ಯಾಂಕಿಂಗ್‌ ದೊರೆತಿತ್ತು. ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಸೀಟು ಸಿಗುತ್ತಿತ್ತು. ಕಡಿಮೆ ಶುಲ್ಕ ಹಾಗೂ ಕಾಲೇಜಿನಲ್ಲಿ ಹೆಚ್ಚಿನ ಕಲಿಕಾ ಸ್ವಾತಂತ್ರ್ಯ ಸಿಗಲಿದೆ ಎನ್ನುವುದಕ್ಕಾಗಿ ಕೊನೆಯ ಸುತ್ತಿನವರೆಗೂ ಕಾದು ಯುವಿಸಿಇ ಆಯ್ಕೆ ಮಾಡಿಕೊಂಡೆ. ಈಗ ಒಳ್ಳೆಯ ಆಫರ್‌ ಬಂದಿದೆ. ಆದರೆ, ಇಷ್ಟೊಂದು ದೊಡ್ಡ ಪ್ಯಾಕೇಜ್‌ ನಿರೀಕ್ಷಿಸಿರಲಿಲ್ಲ. ಬರವಣಿಗೆ, ಕೋಡಿಂಗ್, ತಾಂತ್ರಿಕ ಮತ್ತು ಇತರ ಸುತ್ತುಗಳನ್ನುಆತ್ಮವಿಶ್ವಾಸದಿಂದ ಎದುರಿಸಿದ ಫಲವಾಗಿ ಡೇಟಾ ವಿಷುವ ಲೈಸೇಷನ್ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತಿದೆ’ ಎಂದು ಕೀರ್ತಿ ವಿವರ ನೀಡಿದರು.

ADVERTISEMENT

ಅವರ ತಂದೆ ನಾಗರಾಜ್‌ ಅವರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ, ತಾಯಿ ಚಂದ್ರಕಲಾ ಅವರು ಗೃಹಿಣಿ. ಅವರಿಗೆ
ಇಬ್ಬರು ಕಿರಿಯ ಸಹೋದರಿ ಯರಿದ್ದಾರೆ.

2019-20 ರಲ್ಲಿ ಆಸ್ಟ್ರೇಲಿಯಾ ಮೂಲದ ಕಂಪನಿ ಯುವಿಸಿಇ ವಿದ್ಯಾರ್ಥಿಯೊಬ್ಬರಿಗೆ ವಾರ್ಷಿಕ ₹ 49 ಲಕ್ಷ ಪ್ಯಾಕೇಜ್‌ ನೀಡಿತ್ತು. 2022-23ರಲ್ಲಿ ಒಟ್ಟು 502 ವಿದ್ಯಾರ್ಥಿಗಳು ನಿಯೋಜನೆ ಗಾಗಿ ನೋಂದಾಯಿಸಿಕೊಂಡಿದ್ದರು. 337 ವಿದ್ಯಾರ್ಥಿಗಳು ಆಫರ್‌ಗಳನ್ನು ಪಡೆದಿದ್ದಾರೆ. 71 ಕಂಪನಿಗಳು ಕ್ಯಾಂಪಸ್‌ಗೆ ಭೇಟಿ ನೀಡಿವೆ. ಅಮೆರಿಕ ಮೂಲದ ಫೈವ್‌ಟ್ರಾನ್‌ನಿಂದ ಮೂರು ವಿದ್ಯಾರ್ಥಿಗಳು ₹ 48.3 ಲಕ್ಷ, ಎಂಟು ವಿದ್ಯಾರ್ಥಿಗಳಿಗೆ ಎಸ್‌ಎಪಿ ಲ್ಯಾಬ್‌ಗಳಿಂದ ₹ 24 ಲಕ್ಷದ ಪ್ಯಾಕೇಜ್‌ ದೊರೆತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.