ADVERTISEMENT

ಡಿಸೈನ್‌ ಚಾಲೆಂಜ್‌ನಲ್ಲಿ ವೈಷ್ಣವಿ ವಿಜೇತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:01 IST
Last Updated 5 ಜುಲೈ 2024, 16:01 IST
ವೈಷ್ಣವಿ ಎಂ
ವೈಷ್ಣವಿ ಎಂ   

ಕೆ.ಆರ್.ಪುರ: ಐಐಟಿ ಬಾಂಬೆಯ ಐಡಿಸಿ ಸ್ಕೂಲ್‌ ಆಫ್‌ ಡಿಸೈನ್‌ ಆಯೋಜಿಸಿದ್ದ ಡಿʼಸೋರ್ಸ್-ಡಿಐಸಿ-ಬಿಎಚ್‌ಯೂ ಎಸ್‌ಡಿಜಿ ಡಿಸೈನ್‌ ಚಾಲೆಂಜ್‌ನಲ್ಲಿ ಹೂಡಿಯ ಗೋಪಾಲನ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಮತ್ತು ಪ್ಲಾನಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಬೆಂಗಳೂರಿನ ವೈಷ್ಣವಿ ಎಂ. ವಿಜೇತರಾಗಿದ್ದಾರೆ.

ಸುಸ್ಥಿರ ಅಭಿವೃದ್ಧಿಯ ಗುರಿಯ ನಿಟ್ಟಿನಲ್ಲಿ ಕ್ರಿಯಾಶೀಲ ಹಾಗೂ ವಿನೂತನ ಪರಿಹಾರಗಳನ್ನು ನೀಡುವ ನಿಟ್ಟಿನಲ್ಲಿ ಡಿಡಿಎಸ್‌ ಡಿಸಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದೆ.

ಸ್ಪರ್ಧಿಗಳು ರಚನಾತ್ಮಕ ವಿನ್ಯಾಸ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ವಿಶ್ಲೇಷಿಸಲು ಮತ್ತು ಅಂತಿಮವಾಗಿ ಕಲ್ಪನೆಯ ರೂಪಕೊಡಲು ನೆರವಾಗುತ್ತದೆ. ಶಬ್ದದ ತೀರ್ಪಿನ ಮೇಲೆ ಪರಿಹಾರಗಳನ್ನು ಖಾತರಿಪಡಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.