ಪೀಣ್ಯ ದಾಸರಹಳ್ಳಿ: ‘ಯಾವುದೇ ಸಿದ್ಧ ಮಾದರಿಗಳ ನೆರವಿಲ್ಲದೆ ರಾಮಾಯಣವನ್ನು ರಚಿಸಿದ ವಾಲ್ಮೀಕಿಯವರ ಪ್ರತಿಭೆ ಅಗಾಧ’ ಎಂದು ಕನ್ನಡ ಜಾನಪದ ಪರಿಷತ್ತಿನ ದಾಸರಹಳ್ಳಿ ಕ್ಷೇತ್ರ ಘಟಕದ ಅಧ್ಯಕ್ಷ ವೈ.ಬಿ.ಎಚ್. ಜಯದೇವ್ ಹೇಳಿದರು.
ಹಾವನೂರು ಬಡಾವಣೆಯ ಭೂಮಿಕ ಸೇವಾ ಫೌಂಡೇಶನ್ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು.
‘ಸಮಾಜದ ಕೆಳಸ್ತರದ ಜನರಿಗೆ ನಿಷಿದ್ಧವಾಗಿದ್ದ ಸಂಸ್ಕೃತವನ್ನು ಕರಗತ ಮಾಡಿಕೊಂಡ ವಾಲ್ಮೀಕಿ, ಪ್ರಥಮ ಮಹಾಕಾವ್ಯ ರಾಮಾಯಣ ರಚಿಸಿದರು’ ಎಂದರು.
ಫೌಂಡೇಶನ್ ಅಧ್ಯಕ್ಷೆ ಲತಾ ಕುಂದರಗಿ, ಕನ್ನಡ ಸೇನೆ ಖಜಾಂಚಿ ರಾಜೇಂದ್ರ ಕೊಣ್ಣೂರ, ಪದಾಧಿಕಾರಿಗಳಾದ ರಾಜ್ಯ ಸಲಹಾ ಸಮಿತಿ ಸದಸ್ಯ ರಮೇಶ ಜಮಖಂಡಿ, ಭಾಮಾ ಸದಾಶಿವಯ್ಯ, ಕವಯತ್ರಿ ಗೀತಾ ವಿ.ಆರ್. ವೆಂಕಟೇಶ, ಭೂಮಿಕಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.