ಬೆಂಗಳೂರು:ನಗರದ ತುಂಬೆಲ್ಲಾ ಮಹಾಲಕ್ಷ್ಮಿ ಶುಕ್ರವಾರಮಾವು-ಸೇಬು, ಮಲ್ಲಿಗೆ, ಸುಗಂಧ, ಕೇದಿಗೆಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದಳು.ಹೂವು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗಿದ್ದರೂ ಶ್ರಾವಣ ಮಾಸದ ಮೊದಲಹಬ್ಬವಾದ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಸಂಭ್ರಮ ತಂದಿತ್ತು.
ಬಿಸಾಡಿ ಹೋದರು:ಮಲ್ಲೇಶ್ವರ, ಆರ್.ಟಿ.ನಗರ,ಗಾಂಧಿಬಜಾರ್, ಜಯನಗರ,ಪದ್ಮನಾಭ ನಗರ, ಕತ್ತರಿಗುಪ್ಪೆ, ಚಾಮರಾಜಪೇಟೆ ಸೇರಿದಂತೆವಿವಿಧೆಡೆ ಬಾಳೆಕಂದು, ಮಾವಿನಸೊಪ್ಪನ್ನು ಮಾರಾಟಕ್ಕೆಂದು ತಂದಿದ್ದವರುಉಳಿದದ್ದನ್ನು ಎಲ್ಲೆಂದರಲ್ಲಿ ಬಿಸಾಡಿಹೋಗಿದ್ದರು.
ಹಬ್ಬಕ್ಕಂತ ಇಳಕಲ್ಲಿನಿಂದ ಬಂದೇವ್ರಿ...
‘ಮದುವೆಯಾದ ಮೊದಲನೆ ಸಲವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಾತೀವ್ರಿ. ಹಬ್ಬದ ಸಲುವಾಗಿನೆ ಬಾಗಲಕೋಟೆಯ ಇಳಕಲ್ಲಿನಿಂದ ಬೆಂಗಳೂರಿನ ಅಕ್ಕನ ಮನೆಗೆ ಬಂದೀವಿ’ ಎಂದರು ಇಳಕಲ್ಲಿನ ನಾಗರತ್ನಾ ಮಹಾಂತೇಶ.
‘ಖರೇನ ಭಾಳ ಖುಷಿ ಆಗೇದ್ರಿ. ಮನೆ ಮಂದಿ, ಬಂಧು ಬಾಂಧವರೆಲ್ಲ ಒಟ್ಟಾಗಿ ಖುಷಿಯಿಂದ ಹಬ್ಬ ಆಚರಣೆ ಮಾಡಾಕತ್ತಿವ್ರಿ. ಇರೋ ಬರೋ ಸಂಕಷ್ಟಗಳನ್ನೆಲ್ಲ ಮರೆತು, ಎಲ್ಲರಿಗೂ ಒಳ್ಳೆದಾಗ್ಲಿ ಅನ್ನುವಂಥ ಹಬ್ಬ ಮಾಡೂದ್ರೊಳಗೂ ಖುಷಿ ಅದರ್ರಿ’ ಎಂದು ಹಬ್ಬದ ಸಂತಸವನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.