ಬೆಂಗಳೂರು: ವರ್ಷದ ಅವಧಿಯಲ್ಲಿ ಸಂಚಾರಿ ಪಶು ವೈದ್ಯಕೀಯ ಆಂಬುಲೆನ್ಸ್ ನೆರವಿನಲ್ಲಿ 2.76 ಲಕ್ಷ ಪ್ರಾಣಿಗಳಿಗೆ ತುರ್ತು ಚಿಕಿತ್ಸೆ ಕೊಡಲಾಗಿದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 275 ಸಂಚಾರಿ ಆಂಬುಲೆನ್ಸ್‌ಗಳು ಸೇವೆಯಲ್ಲಿವೆ. ನಿತ್ಯ 900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ವರ್ಷದಲ್ಲಿ 1,78,572 ದನಗಳು, 17,282 ಎಮ್ಮೆಗಳು, 48,566 ಕುರಿಗಳು, 28,293 ಮೇಕೆಗಳು, 359 ಹಂದಿಗಳು ಮತ್ತು 2,939 ನಾಯಿಗಳು ಹಾಗೂ ಇತರೆ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.