ADVERTISEMENT

ದಾಬಸ್‌ಪೇಟೆ: ವೀರಭದ್ರ ಸ್ವಾಮಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:32 IST
Last Updated 29 ಮಾರ್ಚ್ 2024, 15:32 IST
ದೇವರಹೊಸಹಳ್ಳಿಯ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು.
ದೇವರಹೊಸಹಳ್ಳಿಯ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು.   

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿ ದೇವರಹೊಸಹಳ್ಳಿಯ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಬಿರುಬಿಸಿಲಿನ ನಡುವೆಯೂ ಗುರುವಾರ ಸಂಭ್ರಮದಿಂದ ನೆರವೇರಿತು.

ಭಾರಿ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಮೂಲ ದೇವರಿಗೆ ಶತರುದ್ರಾಭಿಷೇಕ ಹೋಮ ಹವನಗಳು ನಡೆದವು. ಮಧ್ಯಾಹ್ನ 1 ರಿಂದ 1.30ರವರೆಗೆ ರಥ ಎಳೆಯಲಾಯಿತು. ಬಣ್ಣ ಬಣ್ಣದ ಬಟ್ಟೆ ಹಾಗೂ ಹೂವುಗಳಿಂದ ಅಲಂಕರಿಸಿದ್ದ ತೇರಿನಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಎಳೆಯುತ್ತಿದ್ದಂತೆ, ಭಕ್ತರು ಜಯಘೋಷ ಕೂಗಿದರು. ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.

ಜನಪದ ಕಲಾತಂಡಗಳಿಂದ ಡೊಳ್ಳು ಕುಣಿತ, ವೀರಗಾಸೆ ಪ್ರದರ್ಶನ ನಡೆಯಿತು. ಭಕ್ತರು ಅರವಟ್ಟಿಗೆಗಳನ್ನು ತೆರೆದು ಜಾತ್ರೆಗೆ ಬಂದವರಿಗೆ ನೀರು, ಮಜ್ಜಿಗೆ, ಪಾನಕ, ಹೆಸರುಬೇಳೆ ಹಂಚಿದರು. ಹಲವು ಅರವಟ್ಟಿಗೆಗಳಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.