ADVERTISEMENT

ಬೆಂಗಳೂರು | ವೀರಲೋಕ ಬುಕ್ಸ್: ದ್ವಿತೀಯ ವಾರ್ಷಿಕೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 16:01 IST
Last Updated 9 ಜೂನ್ 2024, 16:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ವೀರಲೋಕ ಬುಕ್ಸ್ ನಗರದಲ್ಲಿ ಆಯೋಜಿಸಿದ್ದ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು. 

ಸಾಹಿತಿ ಜಯಂತ ಕಾಯ್ಕಿಣಿ ಅವರು ವೀರಲೋಕದ ನೂರನೇ ಕೃತಿಯಾದ ‘ಕವಚ’ ಕಾದಂಬರಿ, ಎಂ. ವೆಂಕಟಸ್ವಾಮಿ ಅವರ ‘ಜಗತ್ತಿನ ಭೀಕರ ಯುದ್ಧಗಳು’, ನೌಶಾದ್ ಜನ್ನತ್ ಅವರ ‘ಬೇವಾಚ್’, ಸಂಧ್ಯಾರಾಣಿ ಅವರ ‘ನಾತಿಚರಾಮಿ’ ಹಾಗೂ ಶೈಲೇಶ್ ಕುಮಾರ್ ಅವರ ‘ಸುಪ್ತ ಸಾಗರದಾಚೆ’ ಕೃತಿಗಳನ್ನು ಬಿಡುಗಡೆ ಮಾಡಿದರು.

ADVERTISEMENT

ಈ ವೇಳೆ ಮಾತನಾಡಿದ ಜಯಂತ ಕಾಯ್ಕಿಣಿ, ‘ದಾಲ್ ತಡ್ಕಾ ದರ ಜಾಸ್ತಿಯಾದರೆ ನಾವು ಯಾರನ್ನೂ ಕೇಳುವುದಿಲ್ಲ. ಆದರೆ, ಕನ್ನಡದ ಪುಸ್ತಕಗಳ ಮುಖಬೆಲೆ ಐದು ರೂಪಾಯಿ ಜಾಸ್ತಿಯಾದರೂ ಓದುಗ ಪುಸ್ತಕ ಖರೀದಿಸಲು ಹಿಂದೆ ಮುಂದೆ ನೋಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ವೀರಲೋಕವು ಅಜ್ಞಾತ ಓದುಗರನ್ನೂ ತಲುಪಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಇದೇ ವೇಳೆ ವೀರಲೋಕದ ಐದು ಮರುಮುದ್ರಿತ ಕೃತಿಗಳನ್ನೂ ಬಿಡುಗಡೆ ಮಾಡಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.