ADVERTISEMENT

ಟೆನ್‌ ಕೆ ಓಟ: ವಾಹನ ಸಂಚಾರ ಬದಲಾವಣೆ

ನಗರದಲ್ಲಿ ಇಂದೂ ವಾಹನ ದಟ್ಟಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 20 ಮೇ 2023, 19:55 IST
Last Updated 20 ಮೇ 2023, 19:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಠೀರವ ಕ್ರೀಡಾಂಗಣದಿಂದ ಭಾನುವಾರ ಬೆಳಿಗ್ಗೆ ವಿಶ್ವ ಟೆನ್ ಕೆ ಓಟ ನಡೆಯುತ್ತಿದ್ದು ಹಲವು ರಸ್ತೆಗಳಲ್ಲಿ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

ಬೆಳಿಗ್ಗೆ 5.30ರಿಂದ ಬೆಳಿಗ್ಗೆ 9 ಗಂಟೆ ತನಕ ಮ್ಯಾರಥಾನ್‌ ನಡೆಯಲಿದೆ. ಈ ಅವಧಿಯಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಪರ್ಯಾಯ ಮಾರ್ಗದಲ್ಲಿ ತೆರಳಬೇಕು ಎಂದು ಸಂಚಾರ ಪೊಲೀಸರು ಚಾಲಕರು,ಸವಾರರಿಗೆ ಮನವಿ ಮಾಡಿದ್ಧಾರೆ.

ಮಾರ್ಗ ಬದಲಾವಣೆ: ಜೆ.ಸಿ ರಸ್ತೆ ಕಡೆಯಿಂದ ವಿಧಾನಸೌಧ, ಶಿವಾಜಿನಗರ, ರಾಜಭವನ ರಸ್ತೆ ಕಡೆಗೆ ಹೋಗುವ ವಾಹನಗಳು ಪೊಲೀಸ್ ಕಾರ್ನರ್, ಕೆ.ಜಿ ರಸ್ತೆ, ಹಳೇ ಅಂಚೆ ಕಚೇರಿ ರಸ್ತೆ ಮೂಲಕ ಕೆ.ಆರ್. ವೃತ್ತ ಅಥವಾ ಪ್ಯಾಲೇಸ್ ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸಬಹುದು ಎಂದು ಪೊಲೀಸರು ಕೋರಿದ್ದಾರೆ.

ADVERTISEMENT

ಜೆ.ಸಿ.ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ, ಎಂಜಿ ರಸ್ತೆ, ಹಲಸೂರು, ಮಾರತ್‍ಹಳ್ಳಿ ಕಡೆಗೆ ಹೋಗುವವರು ಭರತ್ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದುಕೊಂಡು ಎಚ್.ಸಿದ್ದಯ್ಯ ರಸ್ತೆ, ಊವರ್ಶಿ ಜಂಕ್ಷನ್, ಕೆ.ಎಚ್.ಜಂಕ್ಷನ್, ಕೆ.ಎಚ್.ರಸ್ತೆ, ರಿಚ್‍ಮಂಡ್ ಮೇಲ್ಸೇತುವೆ, ರೆಸಿಡೆನ್ಸಿ ರಸ್ತೆ, ಕ್ಯಾಷ್ ಫಾರ್ಮಸಿ, ಅಪೇರಾ ಜಂಕ್ಷನ್, ಮೇಹೊಹಾಲ್, ಕಮಿಷನರೇಟ್ ರಸ್ತೆ, ಗರುಡಾ ಮಾಲ್ ಮೂಲಕ ತೆರಳಬಹುದು.

ಸಿಟಿ ಮಾರುಕಟ್ಟೆ ಮತ್ತು ಟೌನ್‍ಹಾಲ್ ಕಡೆಯಿಂದ ಹಳೆ ಮದ್ರಾಸ್ ರಸ್ತೆ, ಎಂಜಿ ರಸ್ತೆ, ಹಲಸೂರು, ಮಾರತ್‍ಹಳ್ಳಿ ಕಡೆಗೆ ಹೋಗುವವರು ಎನ್ಆರ್ ಜಂಕ್ಷನ್, ಪಿ.ಕಾಳಿಂಗರಾವ್ ರಸ್ತೆ, ಮಿಷನ್ ರಸ್ತೆ, ರಿಚ್‍ಮಂಡ್ ಮೇಲ್ಸೇತುವೆ, ರೆಸಿಡೆನ್ಸಿ ರಸ್ತೆ, ಕ್ಯಾಷ್ ಫಾರ್ಮಸಿ, ಅಪೇರಾ ಜಂಕ್ಷನ್, ಮೇಯೊಹಾಲ್, ಕಮಿಷನರೇಟ್ ರಸ್ತೆ, ಗರುಡಾ ಮಾಲ್, ಹಾಸ್‍ಮ್ಯಾಟ್ ಆಸ್ಪತ್ರೆ ಮೂಲಕ ಮುಂದೆ ಹೋಗಬಹುದಾಗಿದೆ.

ನೃಪತುಂಗಾ ರಸ್ತೆ ಕಡೆಯಿಂದ ಹಳೆ ಮದ್ರಾಸ್ ರಸ್ತೆ, ಎಂಜಿ ರಸ್ತೆ, ಹಲಸೂರು, ಮಾರತ್‍ಹಳ್ಳಿ ಕಡೆಗೆ ಹೋಗುವವರು ಹಡ್ಸನ್ ವೃತ್ತದಲ್ಲಿ ಕಡ್ಡಾಯವಾಗಿ ಬಲಕ್ಕೆ ತಿರುವು ಪಡೆದು ದೇವಾಂಗ ರಸ್ತೆ, ದೇವಾಂಗ ಜಂಕ್ಷನ್, ಮಿಷನ್ ರಸ್ತೆ ಮೂಲಕ ತೆರಳಬೇಕು.

ಹಲಸೂರು ಮತ್ತು ಹಳೇ ವಿಮಾನ ನಿಲ್ದಾಣ ರಸ್ತೆ ಕಡೆಯಿಂದ ಬರುವ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಟ್ರಿನಿಟಿ ವೃತ್ತದ ಮೂಲಕ ಎಂ.ಜಿ.ರಸ್ತೆಯಲ್ಲಿ ಸಂಚರಿಸಬಹುದು. ಇತರೆ ಭಾರಿ ವಾಹನಗಳು ಟ್ರಿನಿಟಿ ವೃತ್ತದ ಮೂಲಕ ಬೇಗಂ ಮಹಲ್ ವೃತ್ತ, ಗುರುದ್ವಾರ ಜಂಕ್ಷನ್ ಮೂಲಕ ಸಂಚರಿಸಬೇಕು ಎಂದು ಪೊಲೀಸರು ಕೋರಿದ್ಧಾರೆ.

ವಾಹನ ನಿಲುಗಡೆಗೆ ಸ್ಥಳಗಳು: ಪಾಸ್ ಹೊಂದಿರುವ ಓಟಗಾರರು ಯು.ಬಿ.ಸಿಟಿ ಪಾವತಿ ಮತ್ತು ನಿಲುಗಡೆ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬೇಕು

ಕ್ಯಾಬ್‍ ಪಿಕ್ ಅಪ್ ಸ್ಥಳಗಳು: ಆರ್‌ಆರ್‌ಎಂಆರ್‌ ರಸ್ತೆ, ಕೆ.ಜಿ ರಸ್ತೆ, ಪೊಲೀಸ್ ಕಾರ್ನರ್ ಬಳಿ, ಸೇಂಟ್ ಮಾರ್ಕ್ಸ್‌ ರಸ್ತೆ, ಎಸ್‌ಬಿಐ ವೃತ್ತದ ಬಳಿ, ಕ್ವೀನ್ಸ್ ವೃತ್ತದ ಬಳಿ ಪ್ರಯಾಣಿಕರನ್ನು ಹತ್ತಿಸಿಕೊಂಡು ತೆರಳಬಹುದು.

Cut-off box - ವಾಹನ ನಿಲುಗಡೆ ನಿಷೇಧಿತ ಸ್ಥಳಗಳು * ಕಸ್ತೂರಿಬಾ ರಸ್ತೆ: ಹಡ್ಸನ್ ವೃತ್ತದಿಂದ ಕ್ವಿನ್ಸ್ ವೃತ್ತದವರೆಗೆ* ಎಂಜಿ ರಸ್ತೆ: ಕ್ವಿನ್ಸ್ ವೃತ್ತದಿಂದ ವೆಬ್ಸ್ ಜಂಕ್ಷನ್ ವರೆಗೆ * ಕಬ್ಬನ್ ರಸ್ತೆ: ಮಣಿಪಾಲ್ ಸೆಂಟರ್‌ನಿಂದ ಸಿಟಿಒ ವೃತ್ತದ ವರೆಗೆ* ಕಾಮರಾಜ ರಸ್ತೆ* ಸೆಂಟ್ರಲ್ ಸ್ಟ್ರೀಟ್* ಕ್ವೀನ್ಸ್ ರಸ್ತೆ: ಬಾಳೇಕುಂದ್ರಿ ವೃತ್ತದಿಂದ ಕ್ವಿನ್ಸ್ ವೃತ್ತದ ವರೆಗೆ ರಸ್ತೆಯ ಎರಡು ಕಡೆ* ರಾಜಭವನ ರಸ್ತೆ: ಸಿಟಿಒ ವೃತ್ತದಿಂದ ರಾಜಭವನ ಜಂಕ್ಷನ್ ವರೆಗೆ* ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ: ಬಾಳೇಕುಂದ್ರಿ ವೃತ್ತದಿಂದ ಕೆ.ಆರ್ ವೃತ್ತದ ವರೆಗೆ* ಕಬ್ಬನ್ ಉದ್ಯಾನದ ಒಳಭಾಗದ ರಸ್ತೆಗಳು* ಮಲ್ಯ ಆಸ್ಪತ್ರೆ ರಸ್ತೆ: ಸಿದ್ದಲಿಂಗ್ಯ ವೃತ್ತದಿಂದ ಆರ್‌ಆರ್‌ಎಂಆರ್ ವೃತ್ತದ ವರೆಗೆ* ಆರ್‌ಆರ್‌ಎಂಆರ್ ರಸ್ತೆ: ಆರ್‌ಆರ್‌ಎಂಆರ್‌ ಜಂಕ್ಷನ್‌ನಿಂದ ಹಡ್ಸನ್ ವೃತ್ತದ ವರೆಗೆ* ವಿಠಲ್ ಮಲ್ಯ ರಸ್ತೆ: ಸಿದ್ದಲಿಂಗಯ್ಯ ವೃತ್ತದಿಂದ ಕಾಫಿ ಡೇ ಜಂಕ್ಷನ್ ವರೆಗೆ

ಐಪಿಎಲ್‌: ವಾಹನ ನಿಲುಗಡೆ ನಿರ್ಬಂಧ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 21ರಂದು (ಭಾನುವಾರ) ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ನಡುವೆ ಐಪಿಎಲ್‌ ಪಂದ್ಯ ನಡೆಯುತ್ತಿದ್ದು ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಂದು ಮಧ್ಯಾಹ್ನ 2ರಿಂದ ರಾತ್ರಿ 10ರ ತನಕ ಕ್ವಿನ್ಸ್‌ ರಸ್ತೆ ಎಂಜಿ ರಸ್ತೆ ಕಬ್ಬನ್‌ ರಸ್ತೆ ರಾಜಭವನ ರಸ್ತೆ ಸೆಂಟ್ರಲ್‌ ಸ್ಟ್ರೀಟ್‌ ಸ್ತೆ ಸೇಂಟ್‌ ಮಾರ್ಕ್ಸ್‌ ರಸ್ತೆ ಮ್ಯೂಸಿಯಂ ರಸ್ತೆ ಕಸ್ತೂರ ಬಾ ರಸ್ತೆ ಟ್ರಿನಿಟಿ ವೃತ್ತ ಲ್ಯಾವೆಲ್ಲಿ ರಸ್ತೆ ವಿಠಲ್‌ ಮಲ್ಯ ರಸ್ತೆ ನೃಪತುಂಗ ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ಕಿಂಗ್ಸ್ ರಸ್ತೆ ಕಂಠೀರವ ಸ್ಟೇಡಿಯಂ ಯುಬಿ ಸಿಟಿ ಪಾರ್ಕಿಂಗ್‌ ಸ್ಥಳ ಬಿಎಂಟಿಸಿ ಬಸ್‌ ನಿಲ್ದಾಣದ ಮೊದಲನೇ ಮಹಡಿ ಹಾಗೂ ಓಲ್ಡ್‌ ಕೆಜಿಐಡಿ ಬಿಲ್ಡಿಂಗ್‌ನಲ್ಲಿ ವಾಹನ ನಿಲುಗಡೆ ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.