ಬೆಂಗಳೂರು: ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಲಂಡನ್ನಲ್ಲಿ ಆಯೋಜಿಸಿದ್ದ ವನ್ಯಜೀವಿ ವರ್ಷದ ಛಾಯಾಚಿತ್ರ ಸ್ಪರ್ಧೆಯಲ್ಲಿ, ಬೆಂಗಳೂರಿನ ಬಾಲಕ ವಿಹಾನ್ ತಾಳ್ಯ ವಿಜೇತರಾಗಿದ್ದಾರೆ.
10 ವರ್ಷ ಹಾಗೂ ಅದಕ್ಕಿಂತ ಕಡಿಮೆ ವರ್ಷದವರಿಗೆ ಹಮ್ಮಿಕೊಂಡಿದ್ದ ‘ವಾಲ್ ಆಫ್ ವಂಡರ್’ ವಿಭಾಗದಲ್ಲಿ ವಿಹಾನ್ ಈ ಸಾಧನೆ ಮಾಡಿದ್ದು, ವನ್ಯಜೀವಿ ಟಿವಿ ನಿರೂಪಕಿ ಹಾಗೂ ಪ್ರಾಣಿಶಾಸ್ತ್ರಜ್ಞೆ ಮೇಗನ್ ಮೆಕ್ಕಬ್ಬಿನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಲ್ಲೂರು ಕೋಟೆಯ ಮೇಲಿನ ಕಲಾಕೃತಿಯ ಛಾಯಾಚಿತ್ರವನ್ನು ಸ್ಪರ್ಧೆಗೆ ಇರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.