ADVERTISEMENT

ಕೊರೊನಾ ಕಾಲದಲ್ಲಿ ‘ಶಾಲಾ ದಿನಗಳ ನೆನಪು’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 19:28 IST
Last Updated 14 ನವೆಂಬರ್ 2020, 19:28 IST
ಕೊರೊನಾ ಕಾಲದಲ್ಲಿ ‘ಶಾಲಾ ದಿನಗಳ ನೆನಪು’-ಸಾಂದರ್ಭಿಕ ಚಿತ್ರ
ಕೊರೊನಾ ಕಾಲದಲ್ಲಿ ‘ಶಾಲಾ ದಿನಗಳ ನೆನಪು’-ಸಾಂದರ್ಭಿಕ ಚಿತ್ರ   

ಬೆಂಗಳೂರು: ಶಾಲೆಗಳೇ ನಡೆಯದ ಈ ಸಂದರ್ಭದಲ್ಲಿ ಮಕ್ಕಳ ದಿನವನ್ನು ವಿಮೋವೇ ಫೌಂಡೇಷನ್‌ ವಿಭಿನ್ನವಾಗಿ ಆಚರಿಸಿದೆ.

‘ನೆನಪು–ಶಾಲಾ ದಿನಗಳು’ ಎಂಬ ಕಾರ್ಯಕ್ರಮವನ್ನು ರೂಪಿಸುವ ಮೂಲಕ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದೆ. ರಜಾ ದಿನ ಅಲ್ಲದಿದ್ದರೂ, ಇದೇ ಮೊದಲ ಬಾರಿಗೆ ಮಕ್ಕಳ ದಿನಾಚರಣೆಯಂದು ಶಾಲೆಗಳು ತೆರೆದಿಲ್ಲ. ಈ ಸಂದರ್ಭವನ್ನು ಬಳಸಿಕೊಂಡವಿಮೋವೇ ಫೌಂಡೇಷನ್‌ನ ಸಂಸ್ಥಾಪಕ ವಿನಯ್‌ ಶಿಂಧೆ ಮಕ್ಕಳು ಶಾಲಾ ದಿನಗಳನ್ನು ಹೇಗೆ ನೆನಪು ಮಾಡಿಕೊಳ್ಳುತ್ತಾರೆ ಎಂಬ ಅಂಶವನ್ನು ತೋರಿಸಿಕೊಡಲು ಈ ಕಾರ್ಯಕ್ರಮ ರೂಪಿಸಿಕೊಂಡಿದ್ದಾರೆ.

ಶಾಲೆಯನ್ನು, ಸಹಪಾಠಿ ಸ್ನೇಹಿತರ ಜೊತೆ ಕಳೆದ ದಿನಗಳನ್ನು ನೆನಪು ಮಾಡಿಕೊಳ್ಳುವ ಪರಿಯನ್ನು ತೋರಿಸುವುದರ ಜೊತೆಗೆ, ಮಕ್ಕಳು ಶಾಲೆಗೆ ಬರುವುದನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶ.

ADVERTISEMENT

ಡಾ. ಬಿ.ಆರ್. ಅಂಬೇಡ್ಕರ್, ಕುವೆಂಪು ಅವರ ಸ್ಮರಣೆಯ ಜೊತೆಗೆ, ಕೊರೊನಾ ಸೇನಾನಿಗಳಿಗೆ ವಂದನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿದೆ.

ಈ ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಲುಈ ಲಿಂಕ್‌ ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.