ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಆರೋಪ: ಬಿ.ಎಸ್‌ ಯಡಿಯೂರಪ್ಪ ಕೋರ್ಟ್‌ಗೆ ಹಾಜರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2018, 11:20 IST
Last Updated 4 ಆಗಸ್ಟ್ 2018, 11:20 IST
ಬಿ.ಎಸ್‌. ಯಡಿಯೂರಪ್ಪ (ಸಂಗ್ರಹ ಚಿತ್ರ).
ಬಿ.ಎಸ್‌. ಯಡಿಯೂರಪ್ಪ (ಸಂಗ್ರಹ ಚಿತ್ರ).   

ಬೆಂಗಳೂರು: ಗುಂಡ್ಲುಪೇಟೆ ಉಪ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರುಶನಿವಾರ ಸಿಟಿ ಸಿವಿಲ್‌ಕೋರ್ಟ್‌ಗೆ ಖುದ್ದು ಹಾಜರಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾಯಿತ ಸಂಸದರು ಮತ್ತು ಶಾಸಕರ ವಿರುದ್ಧಕೋರ್ಟ್ ದೋಷಾರೋಪಣೆ ನಿಗದಿಪಡಿಸಲಾಗಿದೆ.ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಲು ನ್ಯಾಯಾಧೀಶ ಬಿ.ವಿ.ಪಾಟೀಲ ಆದೇಶಿಸಿದ್ದು, ಅರ್ಜಿ‌ ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.

ಆರೋಪಗಳೇನು?
* ಚುನಾವಣೆ ವೇಳೆ ಗುಂಡ್ಲುಪೇಟೆಯ ವೊಡ್ಡನಹೊಸಹಳ್ಳಿಯ ಮೃತ ರೈತ ಚಿಕ್ಕಶೆಟ್ಟಿ ಕುಟುಂಬಕ್ಕೆ ಬಿ.ಎಸ್.ವೈ. ₹1 ಲಕ್ಷ ಹಣ ನೀಡಿದ್ದಾರೆ.
* ಕಮಲದ ಹೂವಿನ ಗುರುತಿಗೆ ಮತ ನೀಡುವಂತೆ ಮತದಾರರಿಂದ, ಕೈ ಎತ್ತಿ ಹೇಳಿ ನೋಡೋಣ ಎಂದು ಪ್ರಮಾಣ ಮಾಡಿಸಿಕೊಂಡಿದ್ದಾರೆ.
* ಈ ಎರಡು ಆರೋಪಗಳ ಕುರಿತಂತೆ ಚುನಾವಣಾ ಅಧಿಕಾರಿಗಳು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
* ಇದರನ್ವಯ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್‌ಗೆ ಚಾರ್ಚ್ ಶೀಟ್ ಸಲ್ಲಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.