ADVERTISEMENT

ದಾವೋಸ್‌ ಭೇಟಿ ಫಲಪ್ರದ: 40ಕ್ಕೂ ಅಧಿಕ ಕಂಪನಿಗಳಿಂದ ಹೂಡಿಕೆಗೆ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 23:17 IST
Last Updated 24 ಜನವರಿ 2020, 23:17 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು: ‘ನಲ್ವತ್ತಕ್ಕೂ ಅಧಿಕ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡುವುದಕ್ಕೆ ಆಸಕ್ತಿ ತೋರಿಸಿವೆ. ಹೀಗಾಗಿ ನನ್ನ ದಾವೋಸ್‌ ಭೇಟಿ ಫಲಪ್ರದ ಎಂದೇ ಭಾವಿಸಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ (ಡಬ್ಲ್ಯುಇಎಫ್‌) ಪಾಲ್ಗೊಂಡು ಶುಕ್ರವಾರ ನಗರಕ್ಕೆ ಮರಳಿದ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.

‘ಬೆಂಗಳೂರು ಬಿಟ್ಟು 4 ದಿನ ಹೋಗಬೇಕಲ್ಲ ಎಂಬ ಅಳುಕು ಇತ್ತು. ಆದರೆ ಅಲ್ಲಿಗೆ ಹೋದ ಬಳಿಕ ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಬಹಳ ಒಳಿತಾಗುತ್ತದೆ ಎಂಬುದು ಸ್ಪಷ್ವವಾಗಿ ಸಂತೋಷವಾಯಿತು. ಕಂಪನಿಗಳ ಮುಖ್ಯಸ್ಥರು, ಪ್ರತಿನಿಧಿಗಳೊಂದಿಗೆ ವೈಯಕ್ತಿಕವಾಗಿ ಚರ್ಚಿಸುವ ಅವಕಾಶ ಸಿಕ್ಕಿತು. ಇಡೀ ಸಮಾವೇಶದಲ್ಲಿ ಕರ್ನಾಟಕವೇಹಲವರ ಮಾತಿನ ವಿಷಯವಾಗಿತ್ತು’ ಎಂದರು.

ADVERTISEMENT

‘ರಾಜ್ಯದಲ್ಲಿ ಲುಲುಕಂಪನಿ ₹ 2 ಸಾವಿರ ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿರುವುದು ಬಹಳ ದೊಡ್ಡ ಬೆಳವಣಿಗೆ,ಇದರಿಂದ ರೈತರು ಬೆಳೆದ ತರಕಾರಿ, ಹಣ್ಣು, ಹಾಲು ಸಾಗಣೆಗೆ ವರದಾನವಾಗಲಿದೆ. ರಾಜ್ಯದಲ್ಲಿ ಹೂಡಿಕೆ ಅವಕಾಶದ ಕುರಿತಂತೆ ನಡೆದ ಸಮಾಲೋಚನೆಯಲ್ಲಿ ನಾವು ಆಹ್ವಾನಿಸಿದ ಎಲ್ಲರೂ ಬಂದಿದ್ದರು. ಈ ಭೇಟಿಯ ಫಲ ಎರಡು ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಆಗುವುದು ನಿಶ್ಚಿತ. ಕೆಲವು ಕಂಪನಿಗಳು ತಮ್ಮ ಕಷ್ಟವನ್ನೂ ಹೇಳಿಕೊಂಡಿವೆ. ಅವುಗಳ ಬಗ್ಗೆ ಚರ್ಚಿಸಿ, ಬಗೆಹರಿಸುವ ಕೆಲಸ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.