ಬೆಂಗಳೂರು: ವಿ.ವಿ.ಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀದಿಬದಿಯ ಆಹಾರ ಮಳಿಗೆಗಳಿಗೆ ಪಾಲಿಕೆ ಆರೋಗ್ಯಾಧಿಕಾರಿಗಳು ಬುಧವಾರ ದಿಢೀರ್ ದಾಳಿ ನಡೆಸಿದರು.
ಒಟ್ಟು 45 ಹೋಟೆಲ್‌ಗಳಿಗೆ ದಾಳಿ ನಡೆಸಿದ್ದು, ಶುಚಿತ್ವ ಕಾಪಾಡದ 13 ಮಳಿಗೆಗಳನ್ನು ಮುಚ್ಚಿಸಿದರು.
ಶುಚಿತ್ವ ಕಾಪಾಡದ ಹಾಗೂ ಕಸವನ್ನು ಮೂಲದಲ್ಲೇ ವಿಂಗಡಿಸದ ಮಳಿಗೆಗಳ ಮಾಲೀಕರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು 65,500 ರೂಪಾಯಿದಂಡ ವಿಧಿಸಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.