ADVERTISEMENT

ಬೆಂಗಳೂರಲ್ಲಿ ವನ್ಯಜೀವಿ ಉತ್ಪನ್ನ ಮಾರಾಟಕ್ಕೆ ಯತ್ನ: ಐವರು ಬಂಧನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 14:48 IST
Last Updated 7 ನವೆಂಬರ್ 2023, 14:48 IST
ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ವನ್ಯಜೀವಿ ಉತ್ಪನ್ನಗಳು
ಪೊಲೀಸರು ಆರೋಪಿಗಳಿಂದ ಜಪ್ತಿ ಮಾಡಿರುವ ವನ್ಯಜೀವಿ ಉತ್ಪನ್ನಗಳು   

ಬೆಂಗಳೂರು: ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ವನ್ಯಜೀವಿ ಉತ್ಪನ್ನಗಳನ್ನು ತಂದು ನಗರದಲ್ಲಿ ಮಾರಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಚಂದ್ರಶೇಖರ್, ಲೋಕೇಶ್, ರಂಗಸ್ವಾಮಿ, ಶೇಖರ್ ಹಾಗೂ ರೈಮಂಡ್ ಬಂಧಿತರು. ಇವರಿಂದ ಆನೆ ದಂತ, ಜಿಂಕೆಗಳ 12 ಕೊಂಬು ಹಾಗೂ ಎರಡು ತಲೆಯದ್ದು ಎನ್ನಲಾದ ಎರಡು ಹಾವುಗಳನ್ನು ಜಪ್ತಿ ಮಾಡಿ ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವೈಯಾಲಿಕಾವಲ್ 18ನೇ ಅಡ್ಡರಸ್ತೆ ಬಳಿ ಇತ್ತೀಚೆಗೆ ಬಂದಿದ್ದ ಆರೋಪಿಗಳು, ವನ್ಯಜೀವಿ ಉತ್ಪನ್ನಗಳನ್ನು ಮಾರಲು ಯತ್ನಿಸುತ್ತಿದ್ದರು. ಕೆಲ ಗ್ರಾಹಕರು ಸ್ಥಳಕ್ಕೆ ಬರುವುದನ್ನು ಕಾಯುತ್ತ ನಿಂತಿದ್ದರು. ಇದೇ ಸಂದರ್ಭದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ತಿಳಿಸಿದರು.

ADVERTISEMENT

‘ಬಂಧಿತ ಆರೋಪಿಗಳು, ಮೈಸೂರು ಹಾಗೂ ಕನಕಪುರದವರು. ಪರಿಚಯಸ್ಥರು ನೀಡಿದ್ದ ವನ್ಯಜೀವಿ ಉತ್ಪನ್ನಗಳನ್ನು ಕಮಿಷನ್ ಆಸೆಗಾಗಿ ಮಾರಲು ಹೊರಟಿದ್ದಾಗಿ ಹೇಳಿಕೆ ನೀಡಿದ್ದಾರೆ. ವನ್ಯಜೀವಿ ಉತ್ಪನ್ನಗಳನ್ನು ಎಲ್ಲಿಂದ ತಂದಿದ್ದರು? ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.