ADVERTISEMENT

ನೀರಿನ ದರ ಏರಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 18:57 IST
Last Updated 7 ನವೆಂಬರ್ 2020, 18:57 IST
   

ಬೆಂಗಳೂರು: ವಿದ್ಯುತ್‌ ಮತ್ತು ನಿರ್ವಹಣಾ ವೆಚ್ಚ ಸರಿದೂಗಿಸುವ ಅವಶ್ಯಕತೆ ಇದ್ದು, ನೀರಿನ ದರ ಏರಿಕೆಗೆ ಅನುಮತಿ ನೀಡಬೇಕು ಎಂದು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಮಂಡಳಿಯು ನಾಲ್ಕು ತಿಂಗಳ ಹಿಂದೆಯೇ ಈ ಪ್ರಸ್ತಾವ ಸಲ್ಲಿಸಿದ್ದರೂ, ವಿದ್ಯುತ್‌ ಶುಲ್ಕ ಏರಿಸಿರುವ ಈ ಸಂದರ್ಭದಲ್ಲಿ ನೀರಿನ ದರವೂ ಹೆಚ್ಚಿಸಿದರೆ ಕಷ್ಟವಾಗುತ್ತದೆ ಎಂದು ಗ್ರಾಹಕರು ಹೇಳುತ್ತಾರೆ.

‘ನೀರಿನ ದರ ಪರಿಷ್ಕರಣೆ ಆಗಿ ಏಳು ವರ್ಷಗಳೇ ಆದವು. ವಿದ್ಯುತ್‌ ಶುಲ್ಕ ಮತ್ತು ನಿರ್ವಹಣಾ ವೆಚ್ಚ ಭರಿಸುವುದು ಸವಾಲಾಗಿದೆ. ಈ ಅಂಶ ಗಮನದಲ್ಲಿಟ್ಟುಕೊಂಡು ದರ ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದರೆ ಶೇ 10ರಿಂದ ಶೇ 12ರಷ್ಟು ದರ ಹೆಚ್ಚಳ ಆಗಬಹುದು’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ತಿಳಿಸಿದರು.

ಒಳಚರಂಡಿಗಳ ಜಾಲ ನಿರ್ಮಾಣ, ಕೊಳವೆಬಾವಿಗಳ ನಿರ್ವಹಣೆ, ವಿದ್ಯುತ್ ಶುಲ್ಕ ಪಾವತಿ, ಕಾಮಗಾರಿಗಳಿಗೆ ಪಡೆದ ಸಾಲದ ಬಡ್ಡಿ ಮರುಪಾವತಿ ಸೇರಿದಂತೆ ಮತ್ತಿತರ ವೆಚ್ಚಗಳು ಹೆಚ್ಚಾಗಿವೆ. ಈ ಕಾರಣದಿಂದ ದರ ಪರಿಷ್ಕರಣೆಗೆ ಅನು
ಮೋದನೆ ನೀಡುವಂತೆ ಮಂಡಳಿಯು ಪ್ರಸ್ತಾವನೆಯಲ್ಲಿ ತಿಳಿಸಿದೆ.

ADVERTISEMENT

2013ರ ಜುಲೈನಲ್ಲಿ ನೀರಿನ ದರ ಪರಿಷ್ಕರಣೆ ಆಗಿತ್ತು. ಜಲಮಂಡಳಿಗೆ ಮಾಸಿಕ ₹115 ಕೋಟಿ ವರಮಾನ ಬರುತ್ತಿದೆ. ವಿದ್ಯುತ್ ಶುಲ್ಕ ಪಾವತಿಗೆ ₹46 ಕೋಟಿ, ನಿರ್ವಹಣೆಗೆ ₹30 ಕೋಟಿ ಮತ್ತು ಅಧಿಕಾರಿ, ಸಿಬ್ಬಂದಿಯ ವೇತನಕ್ಕೆ ₹10 ಕೋಟಿಯಿಂದ ₹15 ಕೋಟಿ ವ್ಯಯವಾಗುತ್ತಿದೆ. ವಿದ್ಯುತ್ ಶುಲ್ಕ ಏರಿಕೆಯಿಂದ ಹೆಚ್ಚುವರಿಯಾಗಿ ₹8 ಕೋಟಿ ಹೊರೆಬೀಳಲಿದೆ
ಎಂದು ಮಂಡಳಿಯ ಮೂಲಗಳು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.