ADVERTISEMENT

ಬೆಂಗಳೂರು ನಗರದ ಈ ಪ್ರದೇಶಗಳಲ್ಲಿ ಇಂದು ನೀರು ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 23:23 IST
Last Updated 18 ಅಕ್ಟೋಬರ್ 2024, 23:23 IST
ಇಂದು ನೀರು ಪೂರೈಕೆ ವ್ಯತ್ಯಯ
ಇಂದು ನೀರು ಪೂರೈಕೆ ವ್ಯತ್ಯಯ   

ಬೆಂಗಳೂರು: ನಗರದ ಕೆಲವೆಡೆ ಶನಿವಾರ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡಲು, ನಗರದ ಜಿಕೆವಿಕೆ (ಕೃಷಿ ವಿವಿ) ಆವರಣದಲ್ಲಿರುವ ಜಲರೇಚಕ ಯಂತ್ರಗಾರದಿಂದ ಕೊಳವೆ ಮಾರ್ಗ ಜೋಡಣೆ ಕಾಮಗಾರಿ ನಡೆಯುತ್ತಿರುವುದು ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ನೀರು ಪೂರೈಕೆ ವ್ಯತ್ಯಯವಾಗುವ ಪ್ರದೇಶಗಳು: ರಾಜು ಕಾಲೊನಿ, ಸರ್ವೋದಯ ನಗರ, ಇಬ್ರಾಹಿಂ ಸ್ಟ್ರೀಟ್ 1 ರಿಂದ 9 ನೇ ರಸ್ತೆವರೆಗೆ, ನೋಬೆಲ್ ಸ್ಕೂಲ್ 1 ಮತ್ತು 2ನೇ ಅಡ್ಡ ರಸ್ತೆ, ನೂರ್ ಲೇಔಟ್, ಶಾಂಪುರ ರೈಲ್ವೆ ಗೇಟ್ 1 ಮತ್ತು 2ನೇ ಅಡ್ಡರಸ್ತೆ, ವೈಯಾಲಿಕಾವಲ್ ಲೇಔಟ್ 1ರಿಂದ 9ನೇ ಮುಖ್ಯ ರಸ್ತೆ, ಸಂದ್ಯಗಪ್ಪ ಲೇಔಟ್ 1ರಿಂದ 3ನೇ ಅಡ್ಡ ರಸ್ತೆ, ವೀರಣ್ಣಪಾಳ್ಯ, ನಾರಾಯಣಸ್ವಾಮಿ ಲೇಔಟ್, ರೈಲ್ವೆ ಗೇಟ್, ವೈಯಾಲಿಕಾವಲ್ ಲೇಔಟ್ 10ರಿಂದ 16ನೇ ಅಡ್ಡ ರಸ್ತೆವರೆಗೆ, ಪ್ರಕೃತಿ ಲೇಔಟ್ , ಗುಂಡುತೋಪು, ಆಯಿಲ್ ಮಿಲ್ ರಸ್ತೆ(1ರಿಂದ 15ನೇ ಅಡ್ಡ ರಸ್ತೆ ಕೆಳಭಾಗ), 16ರಿಂದ 18ನೇ ಅಡ್ಡ ರಸ್ತೆ (1ರಿಂದ 15ನೇ ಅಡ್ಡ ರಸ್ತೆ ಮೇಲ್ಬಾಗ) 3ನೇ ಬ್ಲಾಕ್ ಸರ್ವೀಸ್ ರಸ್ತೆ, ಎಚ್.ಆರ್.ಬಿ.ಆರ್ ಲೇಔಟ್, ಆರ್.ಎಸ್. ಪಾಳ್ಯ, ಸದಾಶಿವ ದೇವಸ್ಥಾನ ರಸ್ತೆ, ಸತ್ಯಮೂರ್ತಿ ರಸ್ತೆ, ಆಯಿಲ್ ಮಿಲ್ ರಸ್ತೆ, ಕೆ.ಎಚ್.ಬಿ ಕ್ವಾರ್ಟರ್ಸ್, ಗುರುಮೂರ್ತಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.